'ನಾನು ಸಿಂಗಲ್​ ಹೌದು, ಆದರೆ...'- ಮನದ ಗುಟ್ಟು ಬಿಚ್ಚಿಟ್ಟ ನಟಿ ಸೋನಾಕ್ಷಿ ಸಿನ್ಹಾ !

Sonakshi Sinha
Published on

ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾಗೆ 33 ವರ್ಷ. ಇನ್ನೂ ಸಿಂಗಲ್​ ಆಗಿಯೇ ಇದ್ದಾರೆ. ಆದರೆ ಅವರ ಮನದ ಆಸೆ ಬೇರೆ ಇದೆಯಂತೇ...!

ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡುತ್ತ, ತಮ್ಮ ಮನದ ಇಂಗಿತ ಹೇಳಿಕೊಂಡಿದ್ದಾರೆ. ನಾನಿನ್ನೂ ಸಿಂಗಲ್​ ಆಗಿಯೇ ಇದ್ದೇನೆ. ಆದರೆ ನಿಜಕ್ಕೂ ನಾನು ಮದುವೆಯಾಗಲು ಬಯಸುತ್ತಿದ್ದೇನೆ. ಸದಾ ನನ್ನ ಮನಸಿನಲ್ಲಿ ಈ ಆಸೆ ಮೂಡುತ್ತದೆ. ಆಗೆಲ್ಲ ನನಗೆ ನಗು ಬರುತ್ತದೆ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.

ನಾನು ನನ್ನ ಕರಿಯರ್​ನ್ನು ಕಟ್ಟಿಕೊಂಡಿದ್ದೇನೆ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಈ ಹಂತಕ್ಕೆ ಪ್ರಾಮಾಣಿಕವಾಗಿ ತಲುಪಿದ್ದೇನೆ. ಹಾಗೇ..ಮದುವೆಯಾಗಬೇಕೆಂದ ಮಾತ್ರಕ್ಕೆ ಅವಸರ ಮಾಡುವುದಿಲ್ಲ. ಬದುಕಿಗೆ ಸರಿಯಾದ ವ್ಯಕ್ತಿ ಸಿಗುವವರೆಗೆ ಕಾಯುತ್ತೇನೆ. ನಾನಿಷ್ಟ ಪಡುವಂತವರು ಸಿಕ್ಕಿ, ಮದುವೆಯಾದಾಗ ತುಂಬ ಖುಷಿ ಪಡುತ್ತೇನೆ..ಹಾಗೇ ಅಲ್ಲಿಯವರೆಗೂ ಸಂತೋಷದಿಂದಲೇ ಇರುತ್ತೇನೆ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.

ನಾವು ನಮ್ಮನ್ನು ಪ್ರೀತಿಸಿಕೊಳ್ಳಬೇಕು ಎಂದು ಹೇಳಿರುವ ಸೋನಾಕ್ಷಿ, ಪ್ರತಿಯೊಂದು ವಿಚಾರವೂ ಪ್ರಾರಂಭವಾಗುವುದು ನಮ್ಮಿಂದಲೇ. ನಾವು ಮೊದಲು ಸಂತೋಷವಾಗಿರುವುದು ತುಂಬ ಮುಖ್ಯ. ನಾವು ಮಾಡುತ್ತಿರುವ ಕೆಲಸದ ಬಗ್ಗೆ, ನಾವು ಏನನ್ನು, ಎಷ್ಟನ್ನು ಹೊಂದಿದ್ದೇವೆಯೋ ಅದರೊಂದಿಗೆ ಖುಷಿಯಿಂದ ಬದುಕಬೇಕು. ನಮ್ಮ ಒಳಗೆ ಸಂತೋಷವಿದ್ದರೆ, ನಾವು ಸಮಾಜದಲ್ಲೂ ಖುಷಿಯಿಂದಲೇ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ತವರಿನಲ್ಲಿದ್ದ ವೇಳೆ ಪರಸ್ತ್ರೀ ಜತೆ ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಬೆನ್ನಟ್ಟಿದ ಸಾವು

ಸಂಬಂಧ, ಮದುವೆ, ಸ್ನೇಹ ಏನೇ ಆಗಿರಲಿ ಮತ್ತೊಬ್ಬರೊಂದಿಗೆ ಪ್ರೀತಿ ಹಂಚಿಕೊಳ್ಳುವ ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು ಎಂದಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಅಜಯ್​ ದೇವಗನ್​ ಅವರೊಂದಿಗೆ ಅಭಿನಯಿಸಿರುವ ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ ಸಿನಿಮಾ ಆಗಸ್ಟ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೊನಾ ಕಾರಣದಿಂದ ಅದು ಯಾವಾಗ ರಿಲೀಸ್​ ಆಗಬಹುದು ಎಂಬುದು ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net