

ಖರಗಪುರ: ಕೋವಿಡ್ 19 ಟೆಸ್ಟ್ ಕೊಂಚ ದುಬಾರಿಯಾಗಿದ್ದು, ಸಾಮಾನ್ಯರ ಕೈಗೆ ಎಟುಕುವಂತಿಲ್ಲ. ಈ ಹೊರೆ ಕಡಿಮೆಯಾಗಲಾರದೇ ಎಂಬ ನಿರೀಕ್ಷೆಯಲ್ಲಿರುವಾಗಲೇ ಐಐಟಿ ಖರಗಪುರ ಅಭಿವೃದ್ಧಿ ಪಡಿಸಿರುವ ಉಪಕರಣ ಕೊಂಚ ಭರವಸೆ ಮತ್ತು ನಿರೀಕ್ಷೆಯನ್ನು ಹುಟ್ಟಿಸಿದೆ.
ರಾಪಿಡ್ ಟೆಸ್ಟ್ ಅಲ್ಟ್ರಾ ಪೋರ್ಟೆಬಲ್ ಡಿವೈಸ್ ಅನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಐಐಟಿ ಖರಗಪುರದ ಸಂಶೋಧಕರು ಹೇಳಿಕೊಂಡಿದ್ದು, ಅದನ್ನು ಸಿದ್ಧಪಡಿಸಲು ಕೇವಲ 400 ರೂಪಾಯಿ ವೆಚ್ಚ ತಗುಲಿದ್ದಾಗಿ ತಿಳಿಸಿದ್ದಾರೆ. ಅದಕ್ಕೆಂದೇ ಸಿದ್ಧಪಡಿಸಿ ಸ್ಮಾರ್ಟ್ಫೋನ್ ಮೂಲಕ ಈ ಟೆಸ್ಟ್ ರಿಸಲ್ಟ್ ಅನ್ನು ಕೇವಲ ಒಂದು ಗಂಟೆಯೊಳಗೆ ಪಡೆಯಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ಇದಕ್ಕೆ ‘ನೋವೆಲ್ ಟೆಕ್ನಾಲಜಿ ಫಾರ್ ಕೋವಿಡ್-19 ರಾಪಿಡ್ ಟೆಸ್ಟ್’ ಎಂದು ಹೆಸರಿಸಲಾಗಿದೆ. ವೆಬಿನಾರ್ ಮೂಲಕ ಈ ಉಪಕರಣವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ.(ಏಜೆನ್ಸೀಸ್)