ತಂದೆ ಓಡಿಸುತ್ತಿದ್ದ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಮಗ ಸಾವು: ಮುಗಿಲುಮುಟ್ಟಿದ ಆಕ್ರಂದನ | Tractor

Tractor
Published on

Tractor: ತಂದೆ ಓಡಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಗಳ ಕೆಳಗೆ ಸಿಲುಕಿ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ.

ಕನಕಯ್ಯ ಮತ್ತು ಲಾವಣ್ಯ ದಂಪತಿಗಳ ಮಗನಾದ ಬೀಡಾ ನಿಕಾಸ್ (8) ಹೊಲದಲ್ಲಿ ಒಂದು ಒಡ್ಡಿನ ಮೇಲೆ ಕುಳಿತು ತನ್ನ ತಂದೆಯನ್ನು ಭೂಮಿಯನ್ನು ಉಳುಮೆ ಮಾಡುವುದನ್ನು ನೋಡುತ್ತಿದ್ದಾಗ ಈ ದುರಂತ ಸಂಭವಿಸುತ್ತದೆ.

ತಂದೆ ರೋಟವೇಟರ್ ಬಳಸಿ ಭೂಮಿ ಹದ ಮಾಡುತ್ತಿದ್​ದರು, ಬಂಡೆಯಿಂದ ಬಿದ್ದು ಚಕ್ರಗಳ ಕೆಳಗೆ ಬಿದ್ದು ಮಗ ತಕ್ಷಣವೇ ಸಾವನ್ನಪ್ಪಿದ್ದಾನೆ.

ಬಾಲಕನ ಶವವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net