ಚಿಕ್ಕಪ್ಪನ ಮಗನ ಮೇಲಿನ ಪ್ರೀತಿಯನ್ನು ವಿರೋಧಿಸಿದ ಕುಟುಂಬ; 16 ವರ್ಷದ ಬಾಲಕಿ ಆತ್ಮಹತ್ಯೆ | Love

Love
Published on

Love : ಚಿಕ್ಕಪ್ಪನ ಮಗನೊಂದಿಗಿನ ತನ್ನ ಪ್ರೀತಿಯನ್ನು ಮನೆಯವರು ವಿರೋಧಿಸಿದ್ದಕ್ಕಾಗಿ 16 ವರ್ಷದ ಆತ್ಮಹತ್ಯೆ ಮಾಡಿಕೊಂಡಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ (ಮೇ.27) ನಡೆದಿದೆ.

ತನ್ನ ಚಿಕ್ಕಪ್ಪನ ಮಗನೊಂದಿಗಿನ ಪ್ರೀತಿಯನ್ನು ಮನೆಯವರು ವಿರೋಧಿಸಿದ ಕಾರಣ 16 ವರ್ಷದ ಬಾಲಕಿ ಡೊಂಬಿವಿ ಪ್ರದೇಶದ ಖಂಬಲ್ಪದಾದಲ್ಲಿರುವ ತನ್ನ ಮನೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಥಾಣೆಯ ಉಲ್ಟಾಸ್‌ನಗರದಲ್ಲಿ ವಾಸಿಸುವ ಬಾಲಕಿ ಆಕೆಯ ಚಿಕ್ಕಪ್ಪನ 25 ವರ್ಷದ ಮಗನನ್ನು ಪ್ರೀತಿಸುತ್ತಿರುವುದಾಗಿ ತನ್ನ ಮನೆಯವರಿಗೆ ತಿಳಿಸಿದ್ದಳು. ಆದರೆ, ಪೋಷಕರು ಈ ಸಂಬಂಧವನ್ನು ತೀವ್ರವಾಗಿ ವಿರೋಧಿಸಿದರು. ಈ ಸಂಬಂಧದಿಂದ ದೂರ ಸರಿಯುವಂತೆಯೂ ಅವರು ಬಾಲಕಿಗೆ ಸಲಹೆ ನೀಡಿದರು. ಆದರೆ, ಹುಡುಗಿ ಇದಕ್ಕೆ ಸಿದ್ದಳಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ಬಾಲಕಿ ತನ್ನ ಮನೆಯ ಛಾವಣಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಸದಸ್ಯರು ತಕ್ಷಣ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆಕೆ ಸಾವನ್ನಪ್ಪಿದಳು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net