ಆತ ಬಿಷ್ಣೋಯಿಗಿಂತಲೂ ಕ್ರೂರಿ, ಐಶ್ವರ್ಯಾ ರೈಗೆ.... Salman Khan ಕುರಿತು ಮಾಜಿ ಗೆಳತಿಯ ಹೇಳಿಕೆ ವೈರಲ್​

Salman Ali
Published on

ನವದೆಹಲಿ: ಮಾಜಿ ಸಚಿವ ಬಾಬಾ ಸಿದ್ದಿಕ್ಕಿರನ್ನು ಹತ್ಯೆ ಮಾಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ (Lawrence Bishnoi)ತನ್ನ ಮುಂದಿನ ಟಾರ್ಗೆಟ್​ ಸಲ್ಮಾನ್​ ಖಾನ್​ (Salman Khan) ಎಂದು ನೇರವಾಗಿಯೇ ಹೇಳಿದ್ದಾನೆ. ಇದೆಲ್ಲದರ ಜೊತೆಗೆ ಸಲ್ಮಾನ್​ ಖಾನ್​ ಮಾಜಿ ಗೆಳತಿ ಸೋಮಿ ಅಲಿ ಕೂಡ ಒಂದಿಲ್ಲೊಂದು ಹೇಳಿಕೆ ಕೊಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಈಕೆ ನೀಡುತ್ತಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

1991ರಿಂದ 8 ವರ್ಷಗಳ ಕಾಲ ಸಲ್ಮಾನ್​ ಖಾನ್​ (Salman Khan) ಜೊತೆ ಡೇಟಿಂಗ್​ ಮಾಡಿದ್ದ ಸೋಮಿ ಅಲಿ ಆ ಬಳಿಕ ನಟ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ದೂರಾಗಿದ್ದಳು. ಇದಾದ ಬಳಿಕ ಈಕೆ ವಿದೇಶಕ್ಕೆ ತೆರಳಿದ್ದಳು. ಬಾಬಾ ಸಿದ್ದಿಕ್ಕಿ ಹತ್ಯೆ ಬಳಿಕ ಇನ್‌ಸ್ಟಾಗ್ರಾಂ (Instagram) ಮುಖಾಂತರ, ಲಾರೆನ್ಸ್ ಬಿಷ್ಣೋಯ್​ಗೆ (lawrence Bishnoi) ನಂಬರ್​ ಕೊಡುವಂತೆ ಮನವಿ ಮಾಡಿದ್ದು, ಜೈಲಲ್ಲಿದ್ದರೂ ಪರ್ವಾಗಿಲ್ಲ ಜೂಮ್ ಕಾಲ್‌ (Zoom Call) ಮಾಡಿ ಎಂದು ಪೋಸ್ಟ್​ ಮಾಡುವ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ನಾಂಡಿ ಹಾಡಿದ್ದರು. ಇದೀಗ ಸಲ್ಮಾನ್​ ಖಾನ್​ ಕ್ರೂರಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಖಅಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸೋಮಿ ಅಲಿ, ನಾನು ನೋಡಿರುವಂತೆ ಸಲ್ಮಾನ್​ ಖಾನ್ (Salman Khan)​ ಲಾರೆನ್ಸ್​ ಬೊಷ್ಣೋಯಿಗಿಂತಲೂ (Lawrence Bishnoi) ತುಂಬಾ ಕ್ರೂರಿ. ಆತನೊಂದಿಗೆ ರಿಲೇಷನ್​ಶಿಪ್​ನಲ್ಲಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನಾನು ಅನುಭವಿಸಿದ್ದೆ. ನಾನು ಮಾತ್ರವೇ ಅಲ್ಲ ಸಲ್ಮಾನ್ ಖಾನ್ (Salman Khan) ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ ಎಲ್ಲ ನಟಿಯರೂ ಸಹ ಸಾಕಷ್ಟು ಹಿಂಸೆ ಮತ್ತು ನೋವನ್ನು ಅನುಭವಿಸಿದ್ದಾರೆ, ಆದರೆ ನನ್ನಷ್ಟು ಕೆಟ್ಟದಾಗಿ ಆತ ಇನ್ಯಾರೊಂದಿಗೂ ನಡೆದುಕೊಂಡಿರಲಿಲ್ಲ.

ಐಶ್ವರ್ಯಾ ರೈ (Aishwarya Rai) ಮೇಲೆಯೂ ಸಹ ಬಹಳ ಕೆಟ್ಟದಾಗಿ ಆತ ಹಲ್ಲೆ ಮಾಡಿದ್ದ. ಐಶ್ವರ್ಯಾ ಗೆ ಹೊಡೆದು ಆಕೆಯ ಭುಜದ ಮೂಳೆಯನ್ನೇ ಮುರಿದಿದ್ದ. ಕತ್ರಿನಾ ಕೈಫ್​ಗೆ (Katrina Kaif) ಯಾವ ರೀತಿ ಹಿಂಸೆ ನೀಡಿದ್ದ ಎಂಬುದು ನನನಗೆ ತಿಳಿದಿಲ್ಲ. ಸಲ್ಮಾನ್ (Salman Khan)​ ನನ್ನ ಜೊತೆ ನಡೆದುಕೊಂಡಿರುವ ರೀತಿಯನ್ನು ನೆನೆಸಿಕೊಂಡರೆ ಬಿಷ್ಣೋಯಿ ಕೂಡ ಆತನ ಮುಂದೆ ಏನು ಅನ್ನಿಸುವುದಿಲ್ಲ ಎಂದು ಸೋಮಿ ಅಲಿ ಹೇಳಿದ್ದಾರೆ.

ದ್ವೇಷಕಾರಲು ಕಾರಣ ಹೀಗಿದೆ 

1998ರಲ್ಲಿ ಸಲ್ಮಾನ್​ ಖಾನ್​ (Salman Khan) ನಟನೆಯ ಹಮ್‌ ಸಾಥ್‌ ಸಾಥ್‌ ಹೈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಕೃಷ್ಣಮೃಗವನ್ನು (Deer) ಬೇಟೆಯಾಡಿದ್ದರು ಎಂಬ ಆರೋಪಿ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್​ ಖಾನ್​ (Salman Khan) 2016ರಲ್ಲಿ ಖುಲಾಸೆಗೊಂಡಿದ್ದರು. ಇದೆಲ್ಲದರ ಹೊರತಾಗಿಯೂ ಬಿಷ್ಣೋಯ್​ ಗ್ಯಾಂಗ್​ (lawrence Bishnoi) ಸಲ್ಲು ಹತ್ಯೆಗೆ ಸಂಚು ಹಾಕಿ ಕುಳಿತಿದ್ದು, ಇದಕ್ಕೆ ಕಾರಣವನ್ನು ಸಹ ನೀಡಲಾಗಿದೆ.

ಬಿಷ್ಣೋಯ್​ (lawrence Bishnoi) ಪ್ರತಿನಿಧಿಸುವ ಬುಡಕಟ್ಟು ಸಮುದಾಯವು ಪವಿತ್ರ ಪ್ರಾಣಿ ಎಂದೇ ಪೂಜಿಸುವ ಕೃಷ್ಣಮೃಗವನ್ನು (Deer) ಕೊಂದ ಸಲ್ಮಾನ್‌ ಖಾನ್‌ (Salman Khan) ಅವರನ್ನು ಮುಗಿಸುವುದು ಲಾರೆನ್ಸ್‌ ಬಿಷ್ಣೋಯಿ ಗುರಿಯಾಗಿದೆ. ಅನೇಕ ಸಂದರ್ಶನದಲ್ಲಿ ಈ ವಿಚಾರವನ್ನು ಕುಖ್ಯಾತ ಗ್ಯಾಂಗ್​ಸ್ಟರ್​ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಇದಲ್ಲದೆ ಈತ ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನು ಆಪರೇಟ್​ ಮಾಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net