ಮೂವರು ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ RCB; ಪೊಲೀಸರನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಟ್ರೋಲ್​ ಮಾಡಿದ ಫ್ಯಾನ್ಸ್

RCB Retain
Published on

ಬೆಂಗಳೂರು: 18ಣೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ಕೆಲಸಗಳು ಆರಂಭಗೊಂಡಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ರಿಟೇನ್​ ಪಟ್ಟಿಯನ್ನು ತಂಡಗಳು (ಅಕ್ಟೋಬರ್​ 31) ಇಂಡು ಬಿಡುಗಡೆ ಮಾಡಿವೆ. ರಿಟೇನ್​ಗೆ ಸಂಬಂಧಿಸಿದಂತೆ ಆರ್​ಸಿಬಿ (RCB) ಫ್ರಾಂಚೈಸಿ ಸಖತ್​ ಸೌಂಡ್​ ಮಾಡಿತ್ತು. ಇದೀಗ ಆರ್​ಸಿಬಿ ತನ್ನ ರಿಟೇನ್​ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಂಡದಲ್ಲಿ ಮೂವರು ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಆರ್​ಸಿಬಿ ಫ್ರಾಂಚೈಸಿಯೂ ತನ್ನ ಮೊದಲ ಆಯ್ಕೆಯಾಗಿ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದು, ಎರಡನೇ ಆಯ್ಕೆಯಾಗಿ ರಜತ್​ ಪಾಟಿದಾರ್​ಗೆ ಮಣೆ ಹಾಕಲಾಗಿದೆ. ಮೂರನೇ ಆಯ್ಕೆಯಾಗಿ ತಂಡ ವೇಗಿ ಯಶ್​ ದಯಾಳ್​ ಅವರನ್ನು ಆಯ್ಕೆ ಮಾಡಿದ್ದು, ಇವರಿಗೆ ಕ್ರಮವಾಗಿ 21, 11 ಹಾಗೂ 5 ಕೋಟಿ ರೂ. ಹಣವನ್ನು ಫ್ರಾಂಚೈಸಿ ವ್ಯಯಿಸಲಿದೆ.

ಸದ್ಯ ಮೂವರು ಆಟಗಾರರನ್ನು ರಿಟೇನ್​ ಮಾಡುವ ಮೂಲಕ ಆರ್​ಸಿಬಿ ಫ್ರಾಂಚೈಸಿ ಎಲ್ಲರ ಗಮನ ಸೆಳೆದಿದ್ದು, ಮೊಹಮ್ಮದ್​ ಸಿರಾಜ್​, ವಿಲ್​ ಜಾಕ್ಸ್​ ಹಾಗೂ ಫಾಫ್​ ಡು ಪ್ಲೆಸಿಸ್​ ಅವರನ್ನು ಆರ್​ಟಿಎಮ್​ ಬಳಸಿ ಖರೀದಿಸುವ ಸಾಧ್ಯತೆ ಹೆಚ್ಚಿದ್ದು, ಈ ಮೂವರು ತಂಡಕ್ಕೆ ವಾಪಸ್​ ಆಗಲಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಅಚ್ಚರಿಯ ನಿರ್ಧಾರದಲ್ಲಿ ಫ್ರಾಂಚೈಸಿ ಮೊಹಮ್ಮದ್​ ಸಿರಾಜ್​ರನ್ನು ರಿಟೇನ್​ ಮಾಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಪೊಲೀಸರನ್ನು ಖರೀದಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಫ್ರಾಂಚೈಸಿಯನ್ನು ಟ್ರೋಲ್​ ಮಾಡಲಾಗುತ್ತಿದೆ. ಟೀಮ್​ ಇಂಡಿಯಾ ಆಟಗಾರ ಮೊಹಮ್ಮದ್​ ಸಿರಾಜ್​ ಅವರನ್ನು ತೆಲಂಗಾಣ ಸರ್ಕಾರ ಡಿವೈಎಸ್​ಪಿಯಾಗಿ ನೇಮಿಸಿದ್ದು, ಅನೇಕರಿಗೆ ಕ್ರಿಕೆಟ್​ ಆಡಲು ಸ್ಫೂರ್ತಿಯಾಗಿದ್ದಾರೆ. ಅಂತಿಮವಾಗಿ ಆರ್​ಸಿಬಿ ಆರ್​ಟಿಎಮ್​ ಕಾರ್ಡ್​ಅನ್ನು ಯಾರ ಮೇಲೆ ಬಳಸಲಿದೆ ಎಂದು ವರ್ಷಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net