Champions Trophy ಆಡಲು ಭಾರತ ಪಾಕಿಸ್ತಾನಕ್ಕೆ ಬಂದೇ ಬರುತ್ತೆ... ಕಾರಣವನ್ನು ಉಲ್ಲೇಖಿಸಿದ ಮಾಜಿ ಸ್ಟಾರ್​ ಆಟಗಾರ

India Pakistan
Published on

ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ (ChampionS Trophy) ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ವರ್ಷಕ್ಕೂ ಮುಂಚಿನಿಂದಲೇ ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಖ್ಯವಾಗಿ ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಕಿತ್ತಾಟದ ವಿಚಾರವಾಗಿ ಟೂರ್ನಿ ಆರಂಭಕ್ಕೂ ಮುಂಚಿನಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಆಟಗಾರರು ನೀಡುತ್ತಿರುವ ಹೇಳಿಕೆ ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳು ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ದ್ವಿಪಕ್ಷೀಯ ಸರಣಿಗಳನ್ನು ಆಡಿ ವರ್ಷಗಳೇ ಕಳೆದಿದ್ದು, ದಿನ ಕಳೆದಂತೆ ಉಭಯ ದೇಶಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಇದೀಗ ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್​ ಟ್ರೋಫಿ (Champios Trophy) ನಡೆಯುತ್ತಿದ್ದು, ಭಾರತ ಮಾತ್ರ ಯಾವುದೇ ಕಾರಣಕ್ಕೆ ಆತಿಥೇಯರ ನೆಲದಲ್ಲಿ ಆಡುವುದಿಲ್ಲ ಏಂದು ಕಡ್ಡಿ ಮುರಿದಂತೆ ಹೇಳಿದೆ. ಒಂದು ವೇಳೆ ಹೈಬ್ರಿಡ್​ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಭಾರತ ಹೇಳಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಪಿಸಿಬಿ ಐಸಿಸಿಗೆ (ICC) ತಿಳಿಸಿದೆ. ಇದೀಗ ಈ ಬಗ್ಗೆ ಮಾಜ ಕ್ರಿಕೆಟಿಗ ವಾಸಿಂ​ ಅಕ್ರಮ್​ (Wasim Akram) ಮಾತನಾಡಿದ್ದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Wasim Akram

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವಾಸಿಂ ಅಕ್ರಮ್​ (Wasim Akram), ನಾನು ನಿಮಗೆ ಭರವಸೆ ಕೊಡುತ್ತೇನೆ. ಅವರು ನಂಬಿರಬಾರದು ನಾವು ಅವರನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಲ್ಲಿನ ಕ್ರಿಕೆಟ್​ ಅಭಿಮಾನಿಗಳು ಹೆಚ್ಚಾಗಿ ಯುವಕರು ಇವರುಗಳನ್ನು ಆರಾಧಿಸುತ್ತಾರೆ. 

ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ವಿಶ್ವದಾದ್ಯಂತೆ ನಕಾರಾತ್ಮಕ ಅಂಶಗಳನ್ನು ಹೆಚ್ಚ ಹರಡಲಾಗಿದೆ. ಭಾರತ ಇಲ್ಲಿ ಕ್ರಿಕೆಟ್​ ಆಡಲು ಬಂದರೆ ಉಭಯ ದೇಶಗಳಿಗೂ ಇದು ಉತ್ತಮ ಅವಕಾಶವಾಗಿರುತ್ತದೆ. ನನ್ನ ಪ್ರಕಾರ ಇದು ಪಾಕಿಸ್ತಾನಕ್ಕೂ ಅದ್ಭುತ ಅವಕಾಶವಾಗಲಿದೆ ಎಂದು ಮಾಜಿ ಆಟಗಾರ ವಾಸಿಂ ಅಕ್ರಮ್ (Wasim Akram)​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net