ಗೌರಿಪಲ್ಲದಲ್ಲಿ ಘನತ್ಯಾಜ್ಯ ಘಟಕ ಉದ್ಘಾಟನೆ

New Project (21)
Published on

ಕಡಬ: ಕೊಂಬಾರು ಗ್ರಾಮದ ಗೌರಿಪಲ್ಲ ಎಂಬಲ್ಲಿ 16.37 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಘನತಾಜ್ಯ ಘಟಕವನ್ನು ಶಾಸಕಿ ಭಾಗಿರಥಿ ಮುರುಳ್ಯ ಇತ್ತೀಚೆಗೆ ನೆರವೇರಿಸಿದರು.

ಕೊಂಬಾರು ಗ್ರಾಪಂ ಅಧ್ಯಕ್ಷ ಮದುಸೂಧನ್ ಓಡೋಳಿ, ಸದಸ್ಯರಾದ ಚೆನ್ನಕೇಶವ, ಸುಶೀಲಾ, ಜಯಶ್ರೀ, ವೀಣಾ, ಸರಿತಾ, ಪಿ.ಎಸ್ ಗಣೇಶ್ ಪ್ರಸಾದ್, ಬಿಳಿನೆಲೆ ಸಿ.ಎ ಬ್ಯಾಂಕ್ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಸಹಾಯಕ ಕಾರ್ಯನಿರ್ಹಾಹಕ ಇಂಜಿನಿಯರ್ ಭರತ್ ಬಿ.ಎಂ, ಜೂನಿಯರ್ ಇಂಜಿನಿಯಾರ್ ಸಂಗಪ್ಪ ಹುಕ್ಕೇರಿ, ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ, ಜಿ.ಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಸಂಜೀನಿ ಒಕ್ಕೂಟ ಅಧ್ಯಕ್ಷೆ ದೇವಕಿ ಪೆರುಂದೋಡಿ, ಗುತ್ತಿಗೆದಾರ ಅವಿನಾಶ್ ಪಲ್ಲಿಗದ್ದೆ ಉಪಸ್ಥಿತರಿದ್ದರು. ಪಿಡಿಒ ರಾಘವೇಂದ್ರ ಗೌಡ ಸ್ವಾಗತಿಸಿದರು. ಲೋಕನಾಥ ಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net