ಪಿಜಕಳ ಶಾಲೆಯ ಮೇಲ್ಛಾವಣಿ ರಿಪೇರಿ

New Project (7)
Published on

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಕಡಬ ವಲಯದ ಶೌರ್ಯ ಘಟಕ ವತಿಯಿಂದ ಪಿಜಕಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಮೂಲಕ ಶಾಲೆಯ ಮೇಲ್ಛಾವಣಿ ರಿಪೇರಿ ಮಾಡಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಕಡಬ ವಲಯದ ಶೌರ್ಯ ವಿಪತ್ತು ಘಟಕದ ಸೇವಾ ಕಾರ್ಯದ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡಿದರು.

ಶಾಲೆಯ ಮುಖ್ಯಗುರು ವೆಂಕಟರಮಣ ಕೆ., ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆಶ್ರಫ್, ಸದಸ್ಯರಾದ ದಯಾನಂದ ಗೌಡ ಪಿ., ಸೇವಾಪ್ರತಿನಿಧಿ ನಳಿನಿ ಉಪಸ್ಥಿತರಿದ್ದರು. ಧರ್ಮಸ್ಥಳ ಶೌರ್ಯ ತಂಡದ ಸದಸ್ಯರಾದ ಧನಂಜಯ, ಮುರಳಿ, ವೇಣುಗೋಪಾಲ, ಲೋಕೇಶ್, ಆನಂದ ಪಿ., ಲಲಿತಾ, ಆನಂದ ಕೆ., ಉಮೇಶ್, ದಯಾನಂದ, ನಳಿನಿ ಪಿ. ಶ್ರಮದಾನದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net