ಮಹಮ್ಮದ್ ಶಾಹಿಲ್ ವಿಟ್ಲ ರಾಷ್ಟ್ರಮಟ್ಟಕ್ಕೆ

PTR_22 JUN_3
Published on

ವಿಟ್ಲ: ಹರಿದ್ವಾರದ ರಾಣಿಪುರ್ ಮಾಡ ಸಮೀಪದ ಶ್ರೀ ಪ್ರೇಮ್‌ನಗರ್ ಆಶ್ರಯದಲ್ಲಿ ಜೂನ್೨೮ರಿಂದ ಜುಲೈ ೧ರವರೆಗೆ ನಡೆಯಲಿರುವ ೧೮ರ ವಯೋಮಿತಿಯ ಬಾಲಕರ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ವಿಟ್ಠಲ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಕಲಾ ವಿಭಾಗ ವಿದ್ಯಾರ್ಥಿ ಮಹಮ್ಮದ್ ಶಾಹಿಲ್ ವಿಟ್ಲ ಆಯ್ಕೆಯಾಗಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಗೌಡ ನೆಕ್ಕಿಲಾರ್ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net