

ಪ್ಯಾರಿಸ್: ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಠೂರಿಯಾ ಎಂಬ ತಮ್ಮ ಪಾರ್ಟ್ನರ್ನನ್ನು ಮದುವೆಯಾಗುತ್ತಿರುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ, ಆತ ಯಾರು, ಹೇಗಿದ್ದಾರೆ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಸೋಹೈಲ್ರನ್ನು ಹನ್ಸಿಕಾ ಮದುವೆಯಾಗುತ್ತಿರುವ ವಿಷಯ ನಿಜ ಎಂಬುದರ ಬಗ್ಗೆಯೂ ಆಕೆ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಹನ್ಸಿಕಾ ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ 'ಈಗ ಮತ್ತು ಮುಂದೆಯೂ' ಎಂದು ಹನ್ಸಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಸೋಹೈಲ್, 'ಐ ಲವ್ ಯೂ' ಎಂದು ಹೇಳಿದ್ದಾರೆ. ಅನೂಷ್ಕಾ ಶೆಟ್ಟಿ, ಖುಷ್ಬೂ, ಶ್ರೀಯಾ ರೆಡ್ಡಿ ಮುಂತಾದವರು ಈ ಜೋಡಿಗೆ ಶುಭ ಕೋರಿದ್ದಾರೆ.
ಇದನ್ನೂ ಓದಿ: ಬಾಲಿವುಡ್ಗೆ ಅಮಲಾ ಪೌಲ್; ‘ಭೋಲಾ’ ಚಿತ್ರದಲ್ಲಿ ನಟನೆ
ಹನ್ಸಿಕಾ ಮತ್ತು ಸೋಹೈಲ್ ಮದುವೆ ಡಿಸೆಂಬರ್ 4ರಂದು ಜೈಪುರದ ಮಂಡೋಟ ಫೋರ್ಟ್ನಲ್ಲಿ ನಡೆಯಲಿದೆ. ಡಿ. 2ರಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ.