More

    ನವೆಂಬರ್​ನಲ್ಲಿ ಸಿನಿಮಾ ಹಬ್ಬ; 20ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ!

    ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ಬಿಡುಗಡೆಯಾಗಿದ್ದು ಬೆರಳಣಿಕೆಯಷ್ಟು ಚಿತ್ರಗಳು. ಆದರೆ, ಎಷ್ಟೇ ಚಿತ್ರಗಳು ಬಿಡುಗಡೆಯಾದರೂ, ಜನ ಇನ್ನೂ ‘ಕಾಂತಾರ’ ಮತ್ತು ‘ಗಂಧದ ಗುಡಿ’ ಹ್ಯಾಂಗೋವರ್​ನಲ್ಲೇ ಇದ್ದಾರೆ. ಅದರಲ್ಲೂ ‘ಕಾಂತಾರ’ ಬಿಡುಗಡೆಯಾಗಿ ಐದನೇ ವಾರದಲ್ಲೂ ಹೌಸ್​ಫುಲ್​ ಪ್ರದರ್ಶನಗಳನ್ನು ಕಾಣುತ್ತಿದೆ.

    ಇದನ್ನೂ ಓದಿ:

    ಕಳೆದ ತಿಂಗಳು ‘ಕಾಂತಾರ’, ‘ಹೆಡ್​ ಬುಷ್​’ ಮತ್ತು ‘ಗಂಧದ ಗುಡಿ’ ಚಿತ್ರಗಳಲ್ಲಿ ಪರಭಾಷೆಗಳ ಇನ್ನಷ್ಟು ದೊಡ್ಡ ಚಿತ್ರಗಳು ಬಿಡುಗಡೆಯಾದವು. ಅದೇ ಕಾರಣಕ್ಕೆ ಕನ್ನಡದ ಮೀಡಿಯಂ ಮತ್ತು ಸಣ್ಣ ಬಜೆಟ್​ನ ಚಿತ್ರಗಳ್ಯಾವುವೂ ಬಿಡುಗಡೆಯಾಗಿರಲಿಲ್ಲ. ಈ ತಿಂಗಳು ಅಂಥ ಭಯವೇನಿಲ್ಲ. ದೊಡ್ಡ ಸ್ಟಾರ್​ಗಳ ಚಿತ್ರಗಳೇನೂ ಇಲ್ಲ ಎನ್ನುವುದು ಒಂದು ಕಡೆಯಾದರೆ, ಬೇರೆ ಭಾಷೆಗಳಿಂದಲೂ ಯಾವುದೃ ಪೈಪೋಟಿ ಇಲ್ಲ. ಹಾಗಾಗಿ. ನವೆಂಬರ್​ನಲ್ಲಿ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ ಮತ್ತು ನವೆಂಬರ್​ನಲ್ಲಿ ನಿಜಕ್ಕೂ ಕನ್ನಡ ಸಿನಿಮಾಗಳ ಹಬ್ಬ ಏರ್ಪಡಲಿದೆ.

    ನವೆಂಬರ್​ 4ರಂದು ಝೈದ್​ ಖಾನ್​ ಅಭಿನಯದ ‘ಬನಾರಸ್​’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದರ ಜತೆಗೆ ‘ಕಂಬ್ಳಿಹುಳ’ ಮತ್ತು ‘ಸೆಪ್ಟೆಂಬರ್​ 13’ ಎಂಬ ಚಿತ್ರಗಳು ಸಹ ಬಿಡುಗಡೆಯಾಗಲಿವೆ. ಮುಂದಿನ ದಿನಗಳಲ್ಲಿ ‘ಯಲ್ಲೋ ಗ್ಯಾಂಗ್ಸ್​’, ‘ರಾಣಾ’, ‘ದಿಲ್​ ಪಸಂದ್​’, ‘ಹುಬ್ಬಳ್ಳಿ ಧಾಭಾ’. ‘ಓ’, ‘ಆರ್​ಸಿ ಬ್ರದರ್ಸ್​’, ‘ವಿದಿ 370’, ‘ಖಾಸಗೀ ಪುಟಗಳು’, ‘ರೆಮೋ’, ‘ವಾಸಂತಿ ನಲಿದಾಗ’, ‘ನಹೀ ಜ್ನಾನೇನ ಸದೃಶಂ’, ‘ವಿಧಿ 370’, ‘ಕುಳ್ಳನ ಹೆಂಡತಿ’, ‘ಮಾರಿಗುಡ್ಡದ ಗಡ್ಡಧಾರಿಗಳು’, ‘ಅಬ್ಬರ’, ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’, ‘ನಟ ಭಯಂಕರ’ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತಿವೆ

    ಇನ್ನು, ಕಳೆದ ಎರಡು ವರ್ಷಗಳ ಕಾಲ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈ ವರ್ಷ ಈಗಾಗಲೇ 165 ಚಿತ್ರಗಳು ಬಿಡುಗಡೆಯಾಗಿದ್ದು, ಇನ್ನೊಂದು ತಿಂಗಳಲ್ಲಿ 20 ಪ್ಲಸ್​ ಚಿತ್ರಗಳು ಬಿಡುಗಡೆಯಾಗಲಿದೆ. ಡಿಸೆಂಬರ್​ನಲ್ಲೂ ಇದೇ ರೀತಿ ಸಂಖ್ಯೆ ಜೋರಾಗಿದ್ದರೆ, ಈ ವರ್ಷ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಡಬ್ಬಲ್​ ಸೆಂಚ್ಯುರಿ ದಾಟುವುದರಲ್ಲಿ ಅನುಮಾನವೇನಿಲ್ಲ.

    ಇದನ್ನೂ ಓದಿ:

    ಮುಂದಿನ ಒಂದು ತಿಂಗಳಲ್ಲಿ 20 ಚಿತ್ರಗಳೇನೋ ಬಿಡುಗಡೆಯಾಗಲಿವೆ. ಆದರೆ, ಈ ಪೈಕಿ ಯಾವ ಚಿತ್ರಗಳನ್ನು ಜನ ಇಷ್ಟಪಟ್ಟು ಗೆಲ್ಲಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಮಲಯಾಳಂಗೆ ರಾಜ್​ ಬಿ ಶೆಟ್ಟಿ; ‘ರುಧಿರಂ’ ಚಿತ್ರದಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts