More

    ಬಾಲಿವುಡ್​ಗೆ ಅಮಲಾ ಪೌಲ್​; ‘ಭೋಲಾ’ ಚಿತ್ರದಲ್ಲಿ ನಟನೆ

    ಮುಂಬೈ: ನಟಿ ಅಮಲಾ ಪೌಲ್​ ದಕ್ಷಿಣದ ನಾಲ್ಕೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುದೀಪ್​ ಜತೆಗೆ ‘ಹೆಬ್ಬುಲಿ’ಯಲ್ಲಿ ನಟಿಸಿರುವ ಅವರು, ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಹಾರಿದ್ದಾರೆ. ಬಾಲಿವುಡ್​ನ ಚಿತ್ರವೊಂದರಲ್ಲಿ ಅವರು ಅತಿಥಿ ಪಾತ್ರವಾದರೂ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಅಪ್ಪು ಪರವಾಗಿ ಕರ್ನಾಟಕ ರತ್ನ ಸ್ವೀಕರಿಸಿದ ಅಶ್ವಿನಿ: ವರುಣ ಸಿಂಚನದ ನಡುವೆ ಪ್ರಶಸ್ತಿ ಪ್ರದಾನ

    ತಮಿಳಿನ ‘ಕೈದಿ’ ಚಿತ್ರವನ್ನು ಹಿಂದಿಯಲ್ಲಿ ‘ಭೋಲಾ’ ಎಂಬ ಹೆಸರಿನಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತಿರಬಹುದು. ಈ ಚಿತ್ರವನ್ನು ಅವರು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಚಿತ್ರದ ನಾಯಕನೂ ಅವರೇ. ಈಗ ಈ ಚಿತ್ರದ ಒಂದು ಪಾತ್ರಕ್ಕೆ ಅಮಲಾ ಅವರನ್ನು ಆಯ್ಕೆ ಮಾಡಿದ್ದಾರಂತೆ ಅಜಯ್​.

    ಈ ಕುರಿತು ಅವರಾಗಲೀ, ಚಿತ್ರತಂಡದವರಾಗಲೀ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ, ಬಾಲಿವುಡ್​ನಲ್ಲಿ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ, ಈ ಚಿತ್ರದಲ್ಲೊಂದು ಅತಿಥಿ ಪಾತ್ರಕ್ಕೆ ಅಮಲಾ ಪೌಲ್​ ಆಯ್ಕೆಯಾಗಿದ್ದಾರಂತೆ. ಡಿಸೆಂಬರ್​ನಲ್ಲಿ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದ್ದು, ಈ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕಾರ್ಟೂನ್ ಕತ್ರಿನಾ; ಹ್ಯಾಲೊವೀನ್ ಪಾರ್ಟಿಗೆ ನಟಿಯ ಹಾರ್ಲೆ ಕ್ವಿನ್ ಲುಕ್

    ಸದ್ಯ ‘ಟೀಚರ್​’, ‘ಕ್ರಿಸ್ಟೋಫರ್​’, ‘ದ್ವಿಜ’ ಮುಂತಾದ ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಅಮಲಾ, ಈ ಚಿತ್ರಗಳನ್ನು ಮುಗಿಸಿ ‘ಭೋಲಾ’ ಚಿತ್ರದಲ್ಲಿ ನಟಿಸುವುದಕ್ಕೆ ಮುಂಬೈಗೆ ತೆರಳಿದ್ದಾರೆ.

    ನವೆಂಬರ್​ನಲ್ಲಿ ಸಿನಿಮಾ ಹಬ್ಬ; 20ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts