ಕಾರ್ಟೂನ್ ಕತ್ರಿನಾ; ಹ್ಯಾಲೊವೀನ್ ಪಾರ್ಟಿಗೆ ನಟಿಯ ಹಾರ್ಲೆ ಕ್ವಿನ್ ಲುಕ್

Katrina
Published on

ಪ್ರತಿ ವರ್ಷ ಅಕ್ಟೋಬರ್ 31ರಂದು ಹ್ಯಾಲೊವೀನ್ ದಿನ ಎಂದು ಪಾಶ್ಚಿಮಾತ್ರ ದೇಶಗಳಲ್ಲಿ ಆಚರಿಸಲಾಗುತ್ತದೆ. ನಿಜವಾದ ದೆವ್ವಗಳು ಹತ್ತಿರ ಬಾರದಿರಲಿ ಎಂದು ಜನರೇ ಭೂತಗಳಂತೆ ವೇಷ ಧರಿಸಿ, ಓಡಾಡುತ್ತಾರೆ. ಈ ಬಾರಿ ಕತ್ರಿನಾ ಕೈಫ್ ಸಹ ಹ್ಯಾಲೊವೀನ್ ದಿನ ಆಚರಿಸಿದ್ದಾರೆ. ದೆವ್ವಗಳ ವೇಷ ಧರಿಸದೇ ಹಾರ್ಲೆ ಕ್ವಿನ್ ವೇಷದಲ್ಲಿ ಮಿಂಚಿದ್ದಾರೆ.

1992ರಲ್ಲಿ ‘ಜೋಕರ್’ ಕಾರ್ಟೂನ್​ನಲ್ಲಿ ಮೊದಲ ಬಾರಿಗೆ ಹಾರ್ಲೆ ಕ್ವಿನ್ ಪಾತ್ರ ಪರಿಚಯಿಸಲಾಗಿತ್ತು. ನಂತರ ಹಲವು ಕಾರ್ಟೂನ್​ಗಳಲ್ಲಿ, ಸರಣಿಗಳಲ್ಲಿ ಈ ಪಾತ್ರ ಕಾಣಿಸಿಕೊಂಡಿತ್ತು. ಆದರೆ ಹಾಲಿವುಡ್​ನ ‘ಸೂಸೈಡ್ ಸ್ಕಾ್ವಡ್’ ಮತ್ತು ‘ಬರ್ಡ್ಸ್ ಆಫ್ ಪ್ರೇ’ ಚಿತ್ರಗಳಲ್ಲಿ ಹಾರ್ಲೆ ಕ್ವಿನ್ ಪಾತ್ರದಲ್ಲಿ ನಟಿಸಿದ್ದ ನಟಿ ಮಾರ್ಗೆಟ್ ರಾಬಿ ಎಲ್ಲರ ಗಮನ ಸೆಳೆದಿದ್ದರು. ಈಗ ಕತ್ರಿನಾ ಕೈಫ್ ಮಾರ್ಗೆಟ್ ರಾಬಿಯ ಹಾರ್ಲೆ ಕ್ವಿನ್ ಲುಕ್​ಅನ್ನು ಹ್ಯಾಲೊವೀನ್​ಗಾಗಿ ಕಾಪಿ ಮಾಡಿಕೊಂಡಿರುವುದು ವಿಶೇಷ. ಕೇಶವಿನ್ಯಾಸ, ಮೇಕಪ್, ಕಾಸ್ಟ್ಯೂಮ್ಳು ಮಾತ್ರವಲ್ಲ ಆಕೆಯ ಭಾವ, ಭಂಗಿಗಳನ್ನೂ ಕತ್ರಿನಾ ನಕಲು ಮಾಡಿದ್ದಾರೆ.

ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಕತ್ರಿನಾ ನಟಿಸಿರುವ ‘ಫೋನ್ ಭೂತ್’ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಉಳಿದಂತೆ ತಮಿಳು ನಟ ವಿಜಯ್ ಸೇತುಪತಿಗೆ ನಾಯಕಿಯಾಗಿ ‘ಮೆರ್ರಿ ಕ್ರಿಸ್ಮಸ್’ ಹಾಗೂ ಸಲ್ಮಾನ್ ಖಾನ್ ಜತೆ ‘ಟೈಗರ್ 3’ ಚಿತ್ರಗಳಲ್ಲಿ ಕತ್ರಿನಾ ನಟಿಸುತ್ತಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net