ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಮಾಜಿಕ ಕಾರ್ಯಕರ್ತೆಯ ಹತ್ಯೆ!

Murder in Kalburgi
Published on

ಕಲಬುರಗಿ: ದುಷ್ಕರ್ಮಿಗಳು ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹಾಗರಗಾ ರಸ್ತೆಯಲ್ಲಿ ನಡೆದಿದೆ. ನಗರದ ಜಂಜಂ ಕಾಲೋನಿ ನಿವಾಸಿ ಮುಜತ್ ಸುಲ್ತಾನ(35) ಕೊಲೆಯಾದ ಮಹಿಳೆ.

ಮೊದಲು ಮುಜತ್ ಸುಲ್ತಾನ್ ಅವರ ಸ್ಕೂಟಿಗೆ ಕಾರ್​ನಿಂದ ಅಪಘಾತ ಮಾಡಲಾಗಿದೆ. ನಂತರ ಸುಲ್ತಾನ್ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಸಮಾಜಿಕ ಕಾರ್ಯಕರ್ತೆಯಾಗಿ ಮಜತ್ ಸುಲ್ತಾನ್ ಕೆಲಸ ಮಾಡುತ್ತಿದ್ದರು.

ಘಟನೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜೀಮ್ ಶೇಖ್, ವಸೀಂ ಶೇಖ್, ನಯಿಮ್, ನದೀಮ್ ಎಂಬುವವರು ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಪೊಲೀಸರ ತನಿಖೆಯಿಂದಷ್ಟೇ ಸಾಮಾಜಿಕ ಕಾರ್ಯಕರ್ತೆ ಮುಜತ್ ಸುಲ್ತಾನ ಅವರ ಹತ್ಯೆಗೆ ಕಾರಣ ಏನೆಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಹಾಡಗಲೇ ನಡೆದಿರುವ ಕೊಲೆ ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಮುಜತ್ ಸುಲ್ತಾನ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಕೊಂಡಿರುವುದೇ ದುಷ್ಕರ್ಮಿಗಳು ಹತ್ಯೆ ಮಾಡಲು ಕಾರಣ ಇರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್​ಪೆಕ್ಟರ್ ಅಮಾನತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net