

ನವದೆಹಲಿ: ಉರ್ಫಿ ಜಾವೇದ್ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡುವ ಉರ್ಫಿ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ಡ್ರೆಸ್ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದಳು. ಇದಕ್ಕಾಗಿ ಈಕೆಯನ್ನು ಫ್ಯಾಷನ್ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.
ನಟಿ ಉರ್ಫಿ ಜಾವೇದ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಸೆನ್ಸೇಷನ್ ಆಗುವಂತಗ ಬಟ್ಟೆಗಳನ್ನು ಧರಿಸಿ ಫೋಟೋಗಳನ್ನು ಇಂಟರ್ನೆಟ್ನಲ್ಲಿ ಹರಿಬಿಡುತ್ತಾರೆ. ಅಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ, ವಿಚಿತ್ರ ವಿನ್ಯಾಸದ ಬಟ್ಟೆ ಧರಿಸುತ್ತಾರೆ. ಇದೀಗ ಉರ್ಫಿ ಜಾವೇದ್ ಕಿವಿ ಹಣ್ಣಿನಿಂದ ಸಿದ್ಧಪಡಿಸಿದ ಬ್ಲೌಸ್ ಧರಿಸಿ ಸುದ್ದಿಯಾಗಿದ್ದಾರೆ.
ಕಿವಿ ಹಣ್ಣಿನಿಂದ ಸಿದ್ಧಪಡಿಸಿದ ಬ್ಲೌಸ್ ಧರಿಸಿ ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಹಂಚಿಕೊಂಡಿದ್ದಾರೆ. ಸದ್ಯ ಈ ರೀಲ್ಸ್ ಸಾಕಷ್ಟು ವೈರಲ್ ಆಗುತ್ತಿದ್ದು, ಚಿತ್ರ-ವಿಚಿತ್ರ ಕಮೆಂಟ್ಗಳು ಬರುತ್ತಿವೆ. ಜತೆಗೆ ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿರುವುದು ಎಂದು ಅಭಿಮಾನಿಗಳಲ್ಲಿ ಪ್ರಶ್ನೆಯನ್ನೂ ಕೇಳಿದ್ದಾರೆ.