

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು. ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ನಡುವೆ ಸಂವಾದ ನಡೆಸಿದರು.
ಹಳೇ ವಿದ್ಯಾರ್ಥಿ ಸುಶಾನ್ ಶಾಲೆಯ ಕಾರ್ಯವೈಖರಿ ಶ್ಲಾಘಿಸಿದರು. ಹಳೇ ವಿದ್ಯಾರ್ಥಿ ಆರ್ಯ ಬಿ.ಯಡಿಯಾಳ್ ತಾವು ಬರೆದ ರಕ್ತಚಂದನ ಕೃತಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಪ್ರಾಂಶುಪಾಲ ಶರಣಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ, ಉಪ ಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಲತಾ ಗೌಡ ವಿಜೇತರ ಪಟ್ಟಿ ವಾಚಿಸಿದರು.