3 ತಿಂಗಳಲ್ಲಿ ಒಂದೇ ಗ್ರಾಮದ 600 ಜನರಿಗೆ ಕಚ್ಚಿರುವ ಹಾವು..!

Snake 1
Published on

ಕಲಬುರಗಿ: ಜಿಲ್ಲೆಯ ನಿಡಗುಂದಾ ಗ್ರಾಮದ ಜನರಿಗೆ ಸರ್ಪ ಸಂಕಷ್ಟ ಎದುರಾಗಿದೆ. ಕಳೆದ ಮೂರು ತಿಂಗಳಲ್ಲಿ 600ಕ್ಕೂ ಹೆಚ್ಚು ಜನರಿಗೆ ಹಾವು ಕಡಿದಿದೆ! ಕಳೆದ ವಾರ ಸರ್ಪ ಕಡಿತದಿಂದ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ.

ಪ್ರತಿನಿತ್ಯ ಕನಿಷ್ಠ ಮೂರ್ನಾಲ್ಕು ಜನರಿಗೆ ಹಾವು ಕಡಿತದ ದುರ್ಘಟನೆಗಳು ಘಟಿಸುತ್ತಿವೆ. ಕಚ್ಚಿದ ನಂತರ ಕ್ಷಣಾರ್ಧದಲ್ಲೇ ಹಾವು ಮರೆಯಾಗುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪ್ರತಿನಿತ್ಯ ನಿಡಗುಂದಾ ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಗ್ರಾಮ ದೇವತೆಗೆ ಪೂಜೆ ಸರಿಯಾಗಿ ನಡೆದಿಲ್ಲ, ಅದರಿಂದ ಸರ್ಪ ದೋಷ ಎದುರಾಗಿದೆ ಎಂಬುದು ಗ್ರಾಮಸ್ಥರ ಭಾವನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net