More

    ನಟ ವರುಣ್ ಧವನ್​ಗೆ ಇತ್ತು ಗಂಭೀರ ಆರೋಗ್ಯ ಸಮಸ್ಯೆ; ವರ್ಟಿಕ್ಯುಲಾರ್​ ಹೈಪೋಫಂಕ್ಷನ್​​ ಅಂದ್ರೆ ಏನು ಗೊತ್ತಾ?

    ಮುಂಬಯಿ: ಡೇವಿಡ್​ ಧವನ್​ ಪುತ್ರ ವರುಣ್ ಧವನ್​ ಸದ್ಯ ತಮ್ಮ ಚಿತ್ರ ಭೇಡಿಯಾ ಪ್ರಮೋಷನ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಭೇಡಿಯಾ ಸಿನೆಮಾದಲ್ಲಿ ದಿಲ್​ವಾಲೆ ಸಿನೆಮಾದ ಕೃತಿ ಮೆನನ್​ ಜೊತೆ ನಟಿಸಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ, ಅಲ್ಲಲ್ಲಿ ಸಿನಿಮಾ ಪ್ರಚಾರ ಮಾಡುತ್ತಿರುವ ಧವನ್​ ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಒಂದು ಸಂವಾದದಲ್ಲಿ ಮಾತನಾಡುವಾಗ ತಮಗಿದ್ದ ಆರೋಗ್ಯ ಸಮಸ್ಯೆ ಯಾವುದೆಂದು ಹೇಳಿಕೊಂಡಿದ್ದಾರೆ. ಧವನ್​ ವೆಸ್ಟಿಬ್ಯುಲಾರ್​ ಹೈಪೋಫಂಕ್ಷನ್​​ ಎಂಬ ಒಳಕಿವಿಯ ಸಮಸ್ಯೆಯಿಂದ ಬಳಲುತ್ತಿದ್ದರು.

    ‘ನನಗೆ ಏನಾಗಿತ್ತು ಎಂದು ತಿಳಿದಿರಲಿಲ್ಲ. ನಾನು ವೆಸ್ಟಿಬುಲರ್ ಹೈಪೋಫಂಕ್ಷನ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದರಲ್ಲಿ ನೀವು ಬ್ಯಾಲೆನ್ಸ್​ ತಪ್ಪುತ್ತೀರಿ’ ಎಂದು ವರುಣ್​ ಧವನ್​ ಕಾರ್ಯಕ್ರಮದಲ್ಲಿ ಹೇಳಿದ್ದರು.

    ವೆಸ್ಟಿಬ್ಯುಲಾರ್​ ಹೈಪೋಫಂಕ್ಷನ್​ ಎಂದರೆ ಏನು ಗೊತ್ತಾ?

    ಒಳಕಿವಿಯಲ್ಲಿ ನಮ್ಮ ದೇಹವನ್ನು ಸಮತೋಲನದಲ್ಲಿ ಇಡಲು ಒಂದು ವ್ಯವಸ್ಥೆ ಇದೆ. ಈ ಭಾಗ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ವೆಸ್ಟಿಬ್ಯುಲಾರ್​ ಹೈಪೋಫಂಕ್ಷನ್​ ಆಗುತ್ತದೆ. ಈ ಭಾಗ ಕಣ್ಣು ಮತ್ತು ಕಿವಿಯ ಸ್ನಾಯುಗಳೊಡನೆ ಕೆಲಸ ಮಾಡುತ್ತದೆ. ಸಮಸ್ಯೆ ಉಂಟಾದಾಗ ಈ ಭಾಗ ಮೆದುಳಿಗೆ ತಪ್ಪು ಸಂದೇಶ ರವಾನಿಸುತ್ತದೆ. ಆಗ ವ್ಯಕ್ತಿಗೆ ಪದೇ ಪದೇ ತಲೆಸುತ್ತುವ ಅನುಭವ ಆಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts