More

    ನೆನೆಸಿದ ವಾಲ್‌ನಟ್ ಸೇವನೆ ಆರೋಗ್ಯಕ್ಕೆ ಬಹುಪ್ರಯೋಜನಕಾರಿ…

    ಡ್ರೈ ಪ್ರೂಟ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ವೃದ್ಧರವರೆಗೂ ಎಲ್ಲ ವಯೋಮಾನದವರಿಗೂ ಸಲ್ಲುವ ಈ ಡ್ರೈ ಪ್ರೂಟ್ಸ್​​ಗಳು ಪೋಷಕಾಂಶಗಳ ಸಮೃದ್ಧ ಆಗರವೇ ಆಗಿದೆ. ಆದರೆ ಈ ಡ್ರೈ ಪ್ರೂಟ್ಸ್​​ಗಳಲ್ಲಿ ಒಂದಾದ ವಾಲ್‌ನಟ್ ಅನ್ನು ಸಾಮಾನ್ಯವಾಗಿ ಹಾಗೇ ಹಿಡಿಯಾಗೇ ತಿಂದು ಅಭ್ಯಾಸ. ಆದರೆ ಈ ಅಕ್ರೋಟ್ ಅನ್ನು ಹಾಗೇ ತಿನ್ನುವುದಕ್ಕಿಂತ ನೆನೆಸಿಟ್ಟು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ನೆನೆಸಿದ ವಾಲ್‌ನಟ್ ತಿನ್ನುವುದರಿಂದ ಆಗುವ ಪ್ರಯೋಜನಗಳು, ಅದರ ಅದ್ಬುತ ಪರಿಣಾಮ ಹಾಗೂ ಅದನ್ನು ತಿನ್ನಲು ಸರಿಯಾದ ಸಮಯದ ಬಗ್ಗೆ ತಿಳಿದುಕೊಳ್ಳೋಣ.

    ಸಣ್ಣದಾಗಿ ಮೆದುಳಿನ ಆಕಾರ ಹೋಲುವ ಈ ವಾಲ್‌ನಟ್‌ಗಳು, ಕೊಂಚ ಒಗರಿನೊಂದಿಗೆ ಅದ್ಬುತ ಸಿಹಿಯನ್ನು ಹೊಂದಿವೆ. ಇವುಗಳನ್ನು ನೆಚ್ಚಿನ ಕುಕ್ಕೀ, ಕೇಕ್, ಸಲಾಡ್, ಬೆಳಗಿನ ಉಪಾಹಾರಗಳೊಂದಿಗೆ ಸೇರಿಸಿ ಸವಿಯುತ್ತೇವೆ. ಖಾದ್ಯಗಳಿಗೆ ವಿಶೇಷ ರುಚಿ ನೀಡುವ ಈ ಮ್ಯಾಜಿಕ್ ವಾಲ್‌ನಟ್‌ಗಳು, ಸೂಕ್ಷ್ಮ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಉಗ್ರಾಣವೇ ಆಗಿದೆ. ಇದರೊಂದಿಗೆ ಈ ಅಕ್ರೋಟ್‌ಗಳು ಜ್ಞಾಪಕ ಶಕ್ತಿ ಸುಧಾರಿಸುಲು ಮತ್ತು ಮೆದುಳಿನ ಕಾರ್ಯವನ್ನು ವರ್ಧಿಸುವುದಕ್ಕೂ ಹೆಸರುವಾಸಿಯಾಗಿದೆ. ಕೇವಲ ಬೆರಳೆಣಿಕೆಯಷ್ಟು ವಾಲ್‌ನಟ್‌ಗಳನ್ನು ತಿನ್ನುವುದರಿಂದ ನಿಮ್ಮ ದೈನಂದಿನ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು.

    ತಿನ್ನುವ ಬಯಕೆಯನ್ನು ನಿಗ್ರಹಿಸುವುದರೊಂದಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ವಾಲ್‌ನಟ್‌ಗಳು ಸಹಾಯ ಮಾಡುತ್ತವೆ. ಇವು ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಮೂಲವಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ನೀವು ಮಧುಮೇಹ ಹೊಂದಿದ್ದರೆ, ವಾಲ್‌ನಟ್‌ಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವುದು ಒಳಿತು. ಏಕೆಂದರೆ ಇವು ಪ್ರೋಟಿನ್, ಫೈಬರ್ ಅಂಶಗಳಿAದ ಕೂಡಿದ್ದು, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ.

    ವಾಲ್‌ನಟ್ ಸೂಪರ್‌ಫುಡ್

    ವಾಲ್‌ನಟ್‌ಗಳು ಕಾರ್ಬೋಹೈಡ್ರೇಟ್‌ಗಳು, ಪ್ರೋಟಿನ್, ಉತ್ತಮ ಕೊಬ್ಬು, ಫೈಬರ್, ವಿಟಮಿನ್‌ಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಂಗಳಿAದ ತುಂಬಿರುವ ಒಂದು ಸೂಪರ್‌ಫುಡ್ ಆಗಿದೆ. ಉತ್ತಮ ಕೊಲೆಸ್ಟಾçಲ್ ಮಟ್ಟವನ್ನು ಸುಧಾರಿಸುವುದರ ಜತೆಗೆ ಮಧುಮೇಹ ನಿರ್ವಹಣೆಗೆ ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಒತ್ತಡ ಮತ್ತು ಆತಂಕವನ್ನು ತಡೆಯಲು ಸಹಾಯ ಮಾಡುತ್ತದೆ. ಫೈಬರ್‌ನಿಂದಾಗಿ ಹಸಿವನ್ನು ತಡೆಯುತ್ತದೆ. ವಾಲ್‌ನಟ್ಸ್ ಅನ್ನು ಪ್ರೋಟಿನ್ ಶೇಕ್ಸ್ ಮತ್ತು ಸ್ಮೂಥಿಗಳಿಗೆ ಸೇರಿಸಬಹುದು.

    ವಾಲ್‌ನಟ್ಸ್ ತ್ವಚೆಗೆ ಒಳ್ಳೆಯದು ಮತ್ತು ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೆ ಮೃದುವಾಗಿಡಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್​​ನಲ್ಲಿ ವಿಟಮಿನ್ ಇ ಮತ್ತು ಬಿ ಇದ್ದು, ಇದು ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಚರ್ಮವನ್ನು ಕಾಂತಿಯುತವಾಗಿಸುತ್ತದೆ.

    ವಾಲ್‌ನಟ್ಸ್​​ನಲ್ಲಿರುವ ವಿಟಮಿನ್ ಬಿ ಟ್ಯಾನ್ ಮತ್ತು ಡಾರ್ಕ್ ಕಲೆಗಳನ್ನು ಹೋಗಲಾಡಿಸಲು, ಚರ್ಮದ ಬಣ್ಣವನ್ನು ಸುಧಾರಿಸಲು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ವಿಟಮಿನ್ ಇ ಚರ್ಮವನ್ನು ರಿಪೇರಿ ಮಾಡುತ್ತದೆ.

    ನೆನೆಸಿಟ್ಟ ವಾಲ್‌ನಟ್ಸ್​ಗಳಿಂದಾಗುವ ಪ್ರಯೋಜನಗಳು

    ಸರಿಯಾದ ತಿಳಿವಳಿಕೆ ಇಲ್ಲದಿರುವುದರಿಂದ ಜನರು ವಾಲ್‌ನಟ್‌ಗಳನ್ನು ಹಾಗೇ ತಿನ್ನುತ್ತಾರೆ. ಆದರೆ ಇವುಗಳನ್ನು ಕೆಲಕಾಲ ನೆನೆಸಿಟ್ಟು ತಿನ್ನುವುದು ಆರೋಗ್ಯಕ್ಕೆ ಇನ್ನೂ ಒಳ್ಳೆಯದು ಎನ್ನುತ್ತಾರೆ ತಜ್ಞ ವೈದ್ಯರು. ಅಕ್ರೋಟ್‌ಗಳನ್ನು ನೆನೆಸುವುದರಿಂದ ಅವುಗಳ ಜೀರ್ಣಸಾಧ್ಯತೆ ಸುಧಾರಿಸುತ್ತದೆ. ಫೈಟಿಕ್ ಆಸಿಡ್ ಮತ್ತು ಟ್ಯಾನಿನ್ ಅನ್ನು ತೆಗೆದುಹಾಕುತ್ತದೆ.

    ವಾಲ್‌ನಟ್‌ಗಳನ್ನು ನೆನೆಸುವುದರಿಂದ ಅಜೀರ್ಣವಾಗುವುದು ತಪ್ಪುತ್ತದೆ. ಏಕೆಂದರೆ ಇದು ಅನಿಲ ರಚನೆಯ ಸಂಯುಕ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಿಫಿನಾಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಪೋಷಕಾಂಶಗಳ ಲಭ್ಯತೆ ಹೆಚ್ಚಿಸುತ್ತದೆ.

    ಎಷ್ಟು ವಾಲ್‌ನಟ್ಸ್​​ಗಳನ್ನು ತಿನ್ನಬೇಕು?

    ಮೂರು-ನಾಲ್ಕು ವಾಲ್‌ನಟ್ಸ್​ಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ದೇಹವು ವಾಲ್‌ನಟ್‌ನಲ್ಲಿರುವ ಪೋಷಕಾಂಶಗಳನ್ನು ಸರಾಗವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬೇಕಿದ್ದರೆ ರಾತ್ರಿ ಮಲಗುವ ಸಮಯದಲ್ಲಿ ಇವುಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬಹುದು. ವಾಲ್‌ನಟ್‌ಗಳು 5 ರಿಂದ 6 ಗಂಟೆಗಳ ಕಾಲ ನೆನೆಯುವುದು ಉತ್ತಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts