More

    ದೇಹದ ತೂಕ ಇಳಿಸಲು ಚಿಯಾ ಬೀಜಗಳು ಸಹಕಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

    ಚಿಯಾ ಬೀಜಗಳ ಬಗ್ಗೆ ನಾವೀಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕೇಳಿರುತ್ತೇವೆ, ನೋಡಿರುತ್ತೇವೆ. ಈ ಕಪ್ಪು ಬಿಳುಪಿನ ಚಿಯಾ ಬೀಜಗಳು ತೂಕ ಇಳಿಕೆ ಕಾರ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಈ ಸಣ್ಣ ಬೀಜಗಳನ್ನು ಫುಡಿಂಗ್‌ಗಳಿಂದ ಸ್ಮೂಥಿವರೆಗೆ ಸೇರಿಸಿ ಸೇವಿಸಬಹುದು. ಸಾಲ್ವಿಯಾ ಹಿಸ್ಟಾನಿಕಾ ಎಂಬ ಪುದೀನ ಜಾತಿಗೆ ಸೇರಿದ ಸಸ್ಯವರ್ಗದಿಂದ ಉತ್ಪಾದನೆಯಾಗುತ್ತದೆ.

    ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದು ತೂಕ ಇಳಿಸುವ ಕಾರ್ಯದಲ್ಲಿ ಮೊದಲ ಹೆಜ್ಜೆ ಇಟ್ಟಂತೆಯೇ ಸರಿ. ಈ ಬೀಜಗಳಲ್ಲಿರುವ ಕರಗದ ಫೈಬರ್ ಮತ್ತು ಪ್ರೋಟಿನ್ ನಿಮ್ಮ ಹೊಟ್ಟೆ ತುಂಬಿಸುವುದಲ್ಲದೆ, ಪೂರ್ಣತೆಯಿಂದ ಕೂಡಿದ ಸಂತೃಪ್ತಿ ಭಾವನೆ ಮೂಡಿಸುತ್ತದೆ.

    ತೂಕ ಇಳಿಕೆಗೆ ಚಿಯಾ ಬೀಜಗಳು ಬೆಸ್ಟ್ ಆಯ್ಕೆ

    ತೂಕ ಇಳಿಕೆಗಾಗಿ ಡಯಟ್ ಫಾಲೋ ಮಾಡುವವರು ಎರಡನೇ ಯೋಚನೆ ಇಲ್ಲದೆ ಈ ಚಿಯಾ ಬೀಜಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಬಹುದು. ಹಾಗಾದರೆ ತೂಕ ನಷ್ಟದಲ್ಲಿ ಚಿಯಾಬೀಜಗಳು ಹೇಗೆ ಸಹಾಯ ಮಾಡಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ, ಚಿಯಾದಲ್ಲಿನ ಫೈಬರ್ ನಿಸ್ಸಂದೇಹವಾಗಿ ವೇಟ್ ಲಾಸ್ ಜರ್ನಿಯಲ್ಲಿ ಸಹಾಯ ಮಾಡುತ್ತದೆ.

    ಇದರೊಂದಿಗೆ ಕ್ಯಾಲೋರಿಕ್ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್, ಫೈಬರ್ ಸೇವನೆಯು ತೂಕ ನಷ್ಟವನ್ನು ಉತ್ತೇಜಿಸುತ್ತದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಜತೆಗೆ ಚಿಯಾ ಬೀಜಗಳಲ್ಲಿನ ಸಮೃದ್ಧ ಫೈಬರ್ ಅಂಶವು (100 ಗ್ರಾಂ ಸೇವನೆಗೆ ಸುಮಾರು 34 ಗ್ರಾಂ) ಸಂತೃಪ್ತಿಯನ್ನು ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡುತ್ತದೆ.

    ಚಿಯಾ ಬೀಜಗಳು ಪ್ರೋಟಿನ್‌ನ ಉತ್ತಮ ಮೂಲವಾಗಿದ್ದು, ಪ್ರೋಟಿನ್‌ ಭರಿತ ಆಹಾರಗಳು ನಿಧಾನವಾಗಿ ಜೀರ್ಣಕ್ರಿಯೆಗೆ ಒಳಗಾಗುತ್ತವೆ. ಇದು ನಿಮ್ಮನ್ನು ಪೂರ್ಣವಾಗಿರಿಸುವುದಲ್ಲದೆ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಅಂತಿಮವಾಗಿ ಚಿಯಾ ಬೀಜಗಳು ನಿಮ್ಮ ಕ್ಯಾಲರಿ ಕೊರತೆಯನ್ನು ಪೂರೈಸುತ್ತವೆ.

    ಆದರೆ ಒಂದು ನೆನಪಿನಲ್ಲಿರಲಿ, ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದು ಅಥವಾ ಈ ಬೀಜಗಳನ್ನು ತಿಂದರೆ ಮಾತ್ರ ತೂಕ ನಷ್ಟವಾಗುವುದಿಲ್ಲ. ಇದರೊಂದಿಗೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರದೊಂದಿಗೆ ಚಿಯಾಗಳನ್ನು ಸಂಯೋಜಿಸಿದಾಗ ಮಾತ್ರ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

    ಚಿಯಾ ಬೀಜಗಳನ್ನು ಸೇವಿಸುವ ಬಗೆ ಹೇಗೆ?

    ಫಿಟ್ನೆಸ್ ತಜ್ಞರು ಮತ್ತು ಇದರ ಪ್ರಭಾವಿತರು ಚಿಯಾ ಬೀಜದ ನೀರನ್ನು ತೂಕ ನಷ್ಟದ ಮ್ಯಾಜಿಕ್ ವಾಟರ್ ಎನ್ನುತ್ತಾರೆ. ಚಿಯಾ ನೀರು ಸೇವಿಸುವವರಿಗೆ ಇಂತಿಷ್ಟೆ ಪ್ರಮಾಣದ ಅನುಪಾತವಿಲ್ಲ. ಒಂದು ಚಮಚ ಚಿಯಾ ಬೀಜಗಳನ್ನು ಒಂದು ಲೋಟ ನೀರಿಗೆ ಬೆರೆಸಿ 30 ನಿಮಿಷಗಳ ಕಾಲ ಅದನ್ನು ನೆನೆಸಿಡಬೇಕು. ಇದು ಜೆಲ್‌ನಂತೆ ರೂಪುಗೊಂಡಾಗ ಈ ನೀರನ್ನು ಸೇವಿಸಬಹುದು.

    ಚಿಯಾ ಬೀಜಗಳನ್ನು ನೀರಿನಲ್ಲಿ ಬೆರೆಸಿ ಮಾತ್ರವಲ್ಲದೆ, ಅವುಗಳನ್ನು ಸ್ಮೂಥಿಗಳಿಗೆ, ಸಲಾಡ್‌ಗಳ ಮೇಲೆ ಅಥವಾ ಚಿಯಾ ಬೀಜದ ಫುಡಿಂಗ್ ಆಗಿ ಸೇವಿಸಬಹುದು.

    ನೀರಿನ ಬಳಕೆ ಬೇಡ ಎಂದಾದರೆ, ನಿಮ್ಮ ನೆಚ್ಚಿನ ಹಾಲಿಗೆ ಈ ಬೀಜಗಳನ್ನು ಬೆರೆಸಿ ರಾತ್ರಿಯಿಡೀ ನೆನೆಸಿಟ್ಟು ಕುಡಿಯಬಹುದು. ಹೆಚ್ಚುವರಿ ತೂಕ ಕಳೆದುಕೊಳ್ಳಲು ಡೇರಿ ಉತ್ಪನ್ನಗಳಿಗೆ ಬದಲಾಗಿ ಬಾದಾಮಿ ಹಾಲಿಗೆ ಸೇರಿಸಿ ಸೇವಿಸಬಹುದು. ನೀವು ಉಪಾಹಾರದಲ್ಲಿ ಚಿಯಾ ಬೀಜಗಳನ್ನು ತಿನ್ನುತ್ತಿದ್ದರೆ, ಇದರೊಂದಿಗೆ ಬಾಳೆಹಣ್ಣು ಮತ್ತು ಸೇಬು ಸೇರಿಸಿಕೊಳ್ಳಬಹುದು.

    ಚಿಯಾ ಬೀಜಗಳ ರೆಸಿಪಿಗಳು
    1. ಚಿಯಾ ಬೀಜದ ಫುಡಿಂಗ್

    ಬೇಕಾಗುವ ಪದಾರ್ಥಗಳು:

    ತೆಂಗಿನಕಾಯಿ ಅಥವಾ ಬಾದಾಮಿ ಹಾಲು: 2 ಕಪ್
    ಚಿಯಾ ಬೀಜಗಳು: 6 ಟೀ ಸ್ಪೂನ್
    ದಾಲ್ಚಿನ್ನಿ ಪೌಡರ್: 1 ಸ್ಪೂನ್
    ಸಮುದ್ರದ ಉಪ್ಪು: ಒಂದು ಪಿಂಚ್
    ಬರ‍್ರಿ ಹಣ್ಣುಗಳು ಮತ್ತು ಡ್ರೈಫ್ರೂಟ್ಸ್

    ತಯಾರಿಸುವ ವಿಧಾನ

    • ಎಲ್ಲ ಪದಾರ್ಥಗಳನ್ನು ಬ್ಲೆಂಡರ್ಗೆ ಸೇರಿಸಿ, ನಯವಾದ ಮಿಶ್ರಣ ಮಾಡಿ. ಬಳಿಕ ಒಂದು ಕಪ್‌ಗೆ ಸರ್ವ್ ಮಾಡಿ ಆನಂದಿಸಿ.
    • ಸ್ಟ್ರಾಬೆರಿ ಚಿಯಾ ಬೀಜದ ಪಾಪ್ಸಿಕಲ್ಸ್
    • ಅಗತ್ಯ ಪದಾರ್ಥಗಳು,
    • ಫ್ರೋಜನ್ ಸ್ಟ್ರಾಬೆರಿಗಳು: 3 ಕಪ್
    • ಬಾದಾಮಿ ಹಾಲು: 1/2 ಕಪ್
    • ಚಿಯಾಬೀಜಗಳು: 1/4 ಕಪ್
    2. ಬರ‍್ರಿಚಿಯಾ ಸೀಡ್ ಸ್ಮೂಥಿ

    ಬೇಕಾಗುವ ಪದಾರ್ಥಗಳು:

    ನಿಮಗೆ ಬೇಕಾದ ಫ್ರೋಜನ್ ಬರ‍್ರಿಗಳು ಅಥವಾ ಇನ್ನಾವುದೇ ಹಣ್ಣುಗಳು
    ಹಾಲು: 1 ಕಪ್
    ಮೊಸರು: 1/4 ಕಪ್
    ಚಿಯಾ ಬೀಜಗಳು: 1 ಸ್ಪೂನ್

    ತಯಾರಿಸುವ ವಿಧಾನ

    ಎಲ್ಲ ಪದಾರ್ಥಗಳನ್ನು ಬ್ಲೆಂಡರ್ಗೆ ಸೇರಿಸಿ, ನಯವಾದ ಮಿಶ್ರಣ ಮಾಡಿ. ಬಳಿಕ ಒಂದು ಕಪ್‌ಗೆ ಸರ್ವ್ ಮಾಡಿ ಆನಂದಿಸಿ.
    ಸ್ಟ್ರಾಬೆರಿ ಚಿಯಾ ಬೀಜದ ಪಾಪ್ಸಿಕಲ್ಸ್
    ಅಗತ್ಯ ಪದಾರ್ಥಗಳು
    ಫ್ರೋಜನ್ ಸ್ಟ್ರಾಬೆರಿಗಳು: 3 ಕಪ್
    ಬಾದಾಮಿ ಹಾಲು: 1/2 ಕಪ್
    ಚಿಯಾಬೀಜಗಳು: 1/4 ಕಪ್

    ತಯಾರಿಸುವ ವಿಧಾನ

    • ಎಲ್ಲ ಪದಾರ್ಥಗಳನ್ನು ಬ್ಲೆಂಡ್ ಮಾಡಿ
    • ಪಾಪ್ಸಿಕಲ್ ಅಚ್ಚಿನಲ್ಲಿ ಸುರಿಯಿರಿ
    • ಪ್ರೀಜ್ ಮಾಡಿ ತೆಗೆದು ಆನಂದಿಸಿ.

    ಕೊನೇ ಮಾತು,
    ಚಿಯಾ ಬೀಜಗಳು ಆಹಾರಕ್ಕೆ ಉತ್ತಮ ಪೌಷ್ಟಿಕಾಂಶದ ಸೇರ್ಪಡೆಯಾಗಿರಬಹುದು. ಆದಾಗ್ಯೂ ಅವುಗಳನ್ನು ಮಿತಿಗಿಂತ ಹೆಚ್ಚಾಗಿ ಸೇವಿಸಿದರೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು. ಚಿಯಾ ಬೀಜಗಳ ಸೇವನೆಯ ಪ್ರಮಾಣ ಎರಡು ಸ್ಪೂನ್‌ಗಿಂತ ಹೆಚ್ಚಾಗಬಾರದು.

    ಚಿಯಾಬೀಜಗಳನ್ನು ಅತಿಯಾಗಿ ತಿನ್ನುವುದರಿಂದ ಫೈಬರ್‌ನಲ್ಲಿ ಹಠಾತ್ ತೀವ್ರ ಏರಿಕೆ ಉಂಟಾಗುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಚ್ಚರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts