More

    ನೀವು ಮಧುಮೇಹಿಗಳಾ? ಹಣ್ಣುಗಳ ಸೇವನೆ ಬಗ್ಗೆ ಗೊಂದಲವಿದೆಯಾ; ಹಾಗಿದ್ದರೆ ನೀವಿದನ್ನು ಓದಲೇಬೇಕು

    ಪ್ರಸ್ತುತ ಮಧುಮೇಹ ಎಂಬುದು ಪ್ರಪಂಚದಾದ್ಯಂತ ಜನರನ್ನು ಕಾಡುವ ಜೀವನಶೈಲಿಯ ಸಾಮಾನ್ಯ ರೋಗಗಳಲ್ಲಿ ಒಂದಾಗಿದೆ. ಲಕ್ಷಾಂತರ ಜನರು ಇದರಿಂದ ಬಾಧಿತರಾಗಿದ್ದಾರೆ. ನಾವಿಂದು ಯಾರನ್ನೇ ಕೇಳಿದರೂ ಹೌದು ನಾವು ಡಯಾಬಿಟಿಕ್‌ಗಳು ಎನ್ನುತ್ತಾರೆ. ಹೀಗಿರುವಾಗ ಯಾವ ಆಹಾರ ಪದಾರ್ಥಗಳನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದುರ ತಿಳಿವಳಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಹಣ್ಣುಗಳ ವಿಷಯ ಬಂದಾಗ ಹೀಗಾಗುವುದಿಲ್ಲ. ಅಯ್ಯೋ ಬಾಳೆಹಣ್ಣು ತಿನ್ನಬೇಕಾ, ತಿನ್ನಬಾರದಾ, ತಿಂದರೆ ಶುಗರ್ ಹೆಚ್ಚಾಗಬಹುದೇನೋ ಎಂಬ ಗೊಂದಲ ಕಾಡುವುದು ಸಾಮಾನ್ಯ. ಹಾಗಾಗಿ ನಾವಿಂದು ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

    ಮಧುಮೇಹ ತಡೆಗಟ್ಟಲು ಮತ್ತು ನಿರ್ವಹಿಸಲು ಆರೋಗ್ಯಕರ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಅನುಸರಣೆ ನಿರ್ಣಾಯಕವಾಗಿರುತ್ತದೆ. ಹಾಗಾಗಿ ಮಧುಮೇಹಿಗಳು ತಾವು ಸೇವಿಸುವ ಎಲ್ಲ ಆಹಾರ ಪದಾರ್ಥಗಳ ಗ್ಲೈಸೆಮಿಕ್ ಸೂಚಿಯನ್ನು ಮೇಲ್ವಿಚಾರಣೆ ಮಾಡಬೇಕು. ಗ್ಲೈಸೆಮಿಕ್ ಸೂಚ್ಯಂಕವು ಕಾರ್ಬೋಹೈಡ್ರೇಟ್ ಭರಿತ ಆಹಾರಗಳ ಶ್ರೇಯಾಂಕವಾಗಿದ್ದು, ಅವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ. ಹೆಚ್ಚಿನ ಶ್ರೇಯಾಂಕವು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಪದಾರ್ಥ ಅಥವಾ ಹಣ್ಣುಗಳನ್ನು ಸೇವಿಸುವ ಮುನ್ನ ಗ್ಲೆಂಸೆಮಿಕ್ ಸೂಚ್ಯಂಕದ ಮೇಲ್ವಿಚಾರಣೆ ಮಾಡುವುದು ಅತ್ಯವಶ್ಯ.

    ಕೆಲವು ಹಣ್ಣುಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಮಧುಮೇಹಿಗಳು ಅಂತಹ ಹಣ್ಣುಗಳನ್ನು ಮಿತವಾಗಿ ತಿನ್ನಬಹುದು.

    ಮಧುಮೇಹಿಗಳಿಗೆ ಹಣ್ಣುಗಳು ಹೇಗೆ ಪ್ರಯೋಜನಕಾರಿ?

    ಶುಗರ್ ರೋಗಿಗಳು ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ ಎಂಬ ತಪ್ಪು ಕಲ್ಪನೆಯಿದೆ. ಹಣ್ಣುಗಳು ವಿವಿಧ ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶಗಳಿಂದ ಸಮೃದ್ಧವಾಗಿರುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಟೈಪ್ 2 ಮಧುಮೇಹದ ಅಪಾಯ ತಪ್ಪಿಸಲು ಹಣ್ಣುಗಳು ಪ್ರಯೋಜನಕಾರಿ. ಹಣ್ಣುಗಳಲ್ಲಿನ ಫೈಬರ್ ಅಂಶವು ಹೊಟ್ಟೆ ತುಂಬಿದ ಭಾವನೆ ಉಂಟುಮಾಡುವ ಮೂಲಕ ಅನಾರೋಗ್ಯಕರ ಕಡುಬಯಕೆ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಹಾಗಾಗಿ ಹಣ್ಣುಗಳು ಆರೋಗ್ಯಕರ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

    ಗ್ಲೈಸೆಮಿಕ್ ಇಂಡೆಕ್ಸ್ ಎಂದರೇನು?

    ಗ್ಲೈಸೆಮಿಕ್ ಸೂಚ್ಯಂಕವು(ಜಿಐ) ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದನ್ನು ಅಳೆಯುವ ಅಂಕಿಅಂಶವಾಗಿದೆ. ಮಧುಮೇಹಿಗಳು ಮುಖ್ಯವಾಗಿ ಸರಿಯಾದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಲು ಗ್ಲೈಸೆಮಿಕ್ ಮಾರ್ಗದರ್ಶಿ ಅನುಸರಿಸುವುದು ಒಳ್ಳೆಯದು. ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಮೌಲ್ಯ ಹೊಂದಿರುವ ಆಹಾರಗಳು ಕಡಿಮೆ ಜಿಐ ಮೌಲ್ಯ ಹೊಂದಿರುವ ಆಹಾರಗಳಿಗಿಂತ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. 55 ಅಥವಾ ಅದಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಆಹಾರಗಳನ್ನು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರವೆಂದು ಪರಿಗಣಿಸಲಾಗುತ್ತದೆ. 56 ರಿಂದ 69 ರವರೆಗಿನ ಮೌಲ್ಯವನ್ನು ಮಧ್ಯಮ ಮತ್ತು 70 ಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರವುದನ್ನು ಹೆಚ್ಚಿನ ಗ್ಲೆöÊಸೆಮಿಕ್ ಸೂಚ್ಯಂಕದ ಆಹಾರಗಳೆಂದು ಪರಿಗಣಿಸಲಾಗುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಯು ಕಡಿಮೆ ಮತ್ತು ಮಧ್ಯಮ ಜಿಐ ಹಣ್ಣುಗಳನ್ನು ಸೇವಿಸಬೇಕು. ಆದಾಗ್ಯೂ ಕಡಿಮೆ ಜಿಐ ಹಣ್ಣುಗಳ ಸೇವನೆಗೆ ಹೆಚ್ಚು ಆದ್ಯತೆ ನೀಡುವುದು ಒಳಿತು. ಇದರೊಂದಿಗೆ ನೀರು ಆಧಾರಿತ ಹಣ್ಣುಗಳನ್ನು ಸೇವಿಸಿ.

    ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳ ಪಟ್ಟಿ

    1. ದ್ರಾಕ್ಷಿ ಹಣ್ಣುಗಳು: ಇದು ಸಿಟ್ರಸ್ ಹಣ್ಣಾಗಿದ್ದು, ಇದರಲ್ಲಿ ಸುಮಾರು ಶೇ.91 ರಷ್ಟು ನೀರಿನಂಶ ಇದೆ. ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ಇದರ ಗ್ಲೈಸೆಮಿಕ್ ಸೂಚ್ಯಂಕವು 25 ಆಗಿದೆ. ಇದರಲ್ಲಿ ನಾರಿನಂಶ ಹೆಚ್ಚಾಗಿದೆ. ದ್ರಾಕ್ಷಿ ಹಣ್ಣಿನಲ್ಲಿ ನರಿಂಗೆನಿನ್ ಎಂಬ ಅಂಶವಿದ್ದು, ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುವ ಫ್ಲೇವನಾಯ್ಡ್ ಆಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    2. ಸ್ಟ್ರಾಬರ‍್ರಿ: ಯೂನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ 1 ಕಪ್ ಹೋಳಾದ, ತಾಜಾ ಸ್ಟ್ರಾಬರ‍್ರಿಗಳು 166 ಗ್ರಾಂ ಪೋಷಕಾಂಶಗಳನ್ನು ಹೊಂದಿದೆ ಎಂದು ತಿಳಿಸಿದೆ. ಸ್ಟ್ರಾಬರ‍್ರಿಗಳು ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಿಂದ ತುಂಬಿದೆ. ಸ್ಟ್ರಾಬರ‍್ರಿಗಳ ಗ್ಲೈಸೆಮಿಕ್ ಸೂಚ್ಯಂಕವು 41 ಆಗಿದೆ.

    3. ಕಿತ್ತಳೆ: ಹೆಚ್ಚಿನ ಫೈಬರ್, ಕಡಿಮೆ ಸಕ್ಕರೆ ಮತ್ತು ವಿಟಮಿನ್ ಸಿ, ಥಯಾಮಿನ್‌ನಂತಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಕಿತ್ತಳೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಕಿತ್ತಳೆ ಶೇ. 87 ರಷ್ಟು ನೀರಿನಂಶ ಹೊಂದಿದ್ದು, 44 ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ.

    4. ಚರ‍್ರಿ ಹಣ್ಣು: 22 ರಷ್ಟು ಕಡಿಮೆ ಜಿಐ ಹೊಂದಿರುವ ಚರ‍್ರಿಗಳು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಬೀಟಾ ಕ್ಯಾರೋಟಿನ್, ಪೋಟ್ಯಾಸಿಯಂ, ಪೋಲೆಟ್, ಮೆಗ್ನಿಸಿಯಂ ಮತ್ತು ಫೈಬರ್‌ಗಳಿಂದ ಸಮೃದ್ಧವಾಗಿದೆ. ಇವು ಇನ್ಸುಲಿನ್ ಉತ್ಪಾದನೆಯನ್ನು 50 ರಷ್ಟು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

    5. ಸೇಬು: ಸೇಬಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇವು ಪೆಕ್ಟಿನ್ ಅನ್ನು ಹೊಂದಿದ್ದು, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರ ಜಿಐ 38 ರಷ್ಟಿದೆ.

    6. ಸೀಬೆಕಾಯಿ: ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ವಿಭಿನ್ನ ಪೇರಳೆಕಾಯಿಗಳಿವೆ. ಇವೆಲ್ಲವೂ ನಂಬಲಾಗದಷ್ಟು ಪೌಷ್ಟಿಕವಾಗಿದೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ರೀತಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ. ಇದರ ಜಿಐ ಮಟ್ಟ 38 ರಷ್ಟಿದೆ.

    7. ಪ್ಲಮ್ ಹಣ್ಣುಗಳು: ಕಡಿಮೆ ಕ್ಯಾಲರಿಗಳ ಜತೆಗೆ, ಪ್ಲಮ್‌ಗಳು ಗ್ಲೈಸೆಮಿಕ್ ಇಂಡೆಕ್ಸ್​​​ನಲ್ಲಿ ಕಡಿಮೆ ಅಂದರೆ 24 ರಷ್ಟಿದೆ. ಇವು ಫೈಬರ್‌ನ ಉತ್ತಮ ಮೂಲವಾಗಿದೆ. ಮಧುಮೇಹಿಗಳಿಗೆ ಮತ್ತು ಹೃದ್ರೋಗಿಗಳಿಗೆ ಸೂಕ್ತ ಹಣ್ಣು.

    8. ಅವಕಾಡೋ ಹಣ್ಣು: ಅವಕಾಡೋದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ಪೊಟ್ಯಾಸಿಯಂ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಹಾನಿಕಾರಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರ ಜಿಐ 15 ರಷ್ಟಿದೆ.

    9. ಪೀಚ್‌ಗಳು: ಈ ಹಣ್ಣಿನ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ, ಫೈಬರ್ ಅಂಶವು ಹೆಚ್ಚಾಗಿದೆ. ಇದು 28 ರಷ್ಟು ಜಿಐ ಹೊಂದಿದೆ.

    10. ನೇರಳೆಹಣ್ಣು: ನೇರಳೆಹಣ್ಣುಗಳು ಕಬ್ಬಿಣ, ಪೊಟ್ಯಾಸಿಯಂ, ವಿಟಮಿನ್ ಸಿ, ಪ್ರೋಟಿನ್‌ಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಮೆಗ್ನೀಸಿಯಂಗಳ ಅತ್ಯುತ್ತಮ ಮೂಲವಾಗಿದೆ. ಈ ಹಣ್ಣುಗಳು ಕಡಿಮೆ ಕ್ಯಾಲರಿ ಹೊಂದಿವೆ. ಇವು ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ರಂಜಕ, ಫ್ಲೇವನಾಯ್ಡ್ಗಳ ಸಮೃದ್ಧ ಮೂಲವಾಗಿದೆ. ಇದು ಸೋಡಿಯಂ, ಥಯಾಮಿನ್, ರೈಬೋಫ್ಲಾವಿನ್, ಕ್ಯಾರೋಟಿನ್, ಫೈಬರ್, ನಿಯಾಸಿನ್, ಫೋಲಿಕ್ ಆಮ್ಲ, ಪ್ರೋಟಿನ್ ಮತ್ತು ಕೊಬ್ಬಿನಂತಹ ಇತರ ಪೋಷಕಾಂಶಗಳನ್ನು ಹೊಂದಿದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ 28 ಆಗಿದೆ.

    11. ಸೀತಾಫಲ: ಸೀತಾಫಲ ದೇಹಕ್ಕೆ ಅಗತ್ಯವಾದ ಪೋಷಕಾಂಶ ಮತ್ತು ಖನಿಜಗಳ ಸೃಮೃದ್ಧ ಮೂಲವಾಗಿದೆ. ಮಧುಮೇಹ ಇರುವವರು ಸೀತಾಫಲ ತಿನ್ನಬಹುದು. ಇದರ ಗ್ಲೈಸೆಮಿಕ್ ಸೂಚ್ಯಂಕವು ಮಧ್ಯಮವಾಗಿದ್ದು, 54 ರಷ್ಟಿದೆ. ಸೀತಾಫಲವು ಹೊಟ್ಟೆಯಲ್ಲಿನ ಆಮ್ಲೀಯತೆ ಕಡಿಮೆ ಮಾಡುವುದು ಮತ್ತು ಉರಿಯೂತ ಗುಣಪಡಿಸುತ್ತದೆ.

    12. ದಾಳಿಂಬೆ: ಇದರ ಗ್ಲೈಸೆಮಿಕ್ಸ್ ಇಂಡೆಕ್ಸ್ ಕೇವಲ 18 ಆಗಿರುವುದರಿಂದ ಮಧುಮೇಹಿಗಳು ಈ ಹಣ್ಣನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

    13. ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ: ಆಮ್ಲ 40 ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ವಿಟಮಿನ್ ಸಿ ಮತ್ತು ಫೈಬರ್‌ನಿಂದ ಕೂಡಿದೆ.

    14. ಪಪ್ಪಾಯಿ: ಪಪ್ಪಾಯಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ ಸಿ, ಎ, ಬಿ, ಇ ಮತ್ತು ಕೆ ಗಳ ಅತ್ಯುತ್ತಮ ಮೂಲವಾಗಿದೆ. ಪಪ್ಪಾಯಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು, ಇದು ಹಾನಿಕಾರಕ ರಾಡಿಕಲ್‌ಗಳಿಂದ ಮಧುಮೇಹ ಮತ್ತು ಮಧುಮೇಹ ಆಧಾರಿತ ಹೃದ್ರೋಗ ತಡೆಯಲು ಸಹಾಯ ಮಾಡುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ 60 ಆಗಿದೆ.

    15. ಏಪ್ರಿಕಾಟ್‌ಗಳು: ಏಪ್ರಿಕಾಟ್‌ಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಹಾನಿಕಾರಕ ಸಂಯುಕ್ತಗಳನ್ನು ತಟಸ್ಥಗೊಳಿಸುತ್ತದೆ. ಪೇರಳೆ, ಪೀಚ್‌ಗಳಂತೆ ಹೆಚ್ಚು ಫೈಬರ್ ಅಂಶ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಾಜಾ ಏಪ್ರಿಕಾಟ್‌ಗಳು ಜಿಐ 34 ಮತ್ತು ಒಣಗಿದ ಏಪ್ರಿಕಾಟ್‌ಗಳು 30 ಜಿಐ ಹೊಂದಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts