More

    ಕೂದಲು ತೆಳುವಾಗುವುದನ್ನು ತಡೆಯಬಹುದು; ನಿಯಂತ್ರಣಕ್ಕೆ ಇಲ್ಲಿದೆ 7 ನೈಸರ್ಗಿಕ ಎಣ್ಣೆಗಳ ಮಾಹಿತಿ

    ಕೂದಲು ತೆಳುವಾಗುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಕೂದಲಿಗೆ ಆರೈಕೆಯ ಕೊರತೆ, ಹೀಟ್‌ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದು, ಕಠಿಣ ರಾಸಾಯನಿಕಗಳು ಮತ್ತು ಪರಿಸರ ಮಾಲಿನ್ಯ ಕೂದಲಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರ ಅಡ್ಡಪರಿಣಾಮವಾಗಿ ಕೂದಲು ತೆಳುವಾಗುವುದು, ತುದಿ ಒಡೆಯುವಿಕೆ ಮತ್ತು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.

    ಆದರೆ ನಮ್ಮ ಹಳೆಯ ಪದ್ಧತಿ ಅಂದರೆ ಹಿಂದೆ ಬಳಸುತ್ತಿದ್ದ ಕೆಲವು ಎಣ್ಣೆಗಳನ್ನು ಕೂದಲಿಗೆ ಹಾಗೂ ನೆತ್ತಿಗೆ ಮಸಾಜ್ ಮಾಡುವ ಮೂಲಕ ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ. ಹಾಗಿದ್ದರೆ ನಾವಿಂದು ಕೂದಲಿನ ಆರೋಗ್ಯಕ್ಕೆ ಬಳಸುವ ಎಣ್ಣೆಗಳ ಬಗ್ಗೆ ತಿಳಿದುಕೊಳ್ಳೋಣ.

    ನೈಸರ್ಗಿಕ ತೈಲಗಳ ಉತ್ತಮ ಪರಿಣಾಮದಿಂದಾಗಿ ಇದರ ಜ್ಞಾನವು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನೆಯಾಗುತ್ತಾ ಬಂದಿದೆ. ಈ ಎಣ್ಣೆಗಳು ಕೂದಲಿನ ವಿಷಯದಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಇದರಿಂದಾಗಿ ಕೂದಲು ಗಟ್ಟಿಯಾಗಿ, ದಟ್ಟವಾಗಿ ಹಾಗೂ ಆರೋಗ್ಯವಾಗಿ ಬೆಳೆಯಬೇಕೆಂಬ ನಿಮ್ಮ ಕನಸು ಕೂಡ ನನಸಾಗಲಿದೆ.

    ಕೂದಲು ತೆಳುವಾಗುವುದು ಮತ್ತು ಉದುರುವುದನ್ನು ನಿಯಂತ್ರಿಸುವ 7 ತೈಲಗಳು

    1. ಅರ್ಗಾನ್ ಎಣ್ಣೆ: ಲಿಕ್ವಿಡ್ ಗೋಲ್ಡ್ ಎಂದು ಜನಪ್ರಿಯವಾಗಿವಾಗಿರುವ ಅರ್ಗಾನ್ ಎಣ್ಣೆಯು ಕೂದಲಿಗೆ ಅದ್ಬುತಗಳನ್ನು ಮಾಡಬಲ್ಲದು. ಈ ಎಣ್ಣೆಯು ಕೂದಲಿಗೆ ನೈಸರ್ಗಿಕ ರಕ್ಷಕವಾಗಿ ಕೆಲಸಮಾಡುತ್ತದೆ. ಇದು ಸೂರ್ಯನ ಕಿರಣಗಳಿಂದ ಮತ್ತು ಶಾಖದಿಂದ ಕೂದಲಿಗೆ ಆಗುವ ಹಾನಿ ತಪ್ಪಿಸಿ ರಕ್ಷಿಸುತ್ತದೆ. ಇದಲ್ಲದೆ ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ನೆತ್ತಿಯ ಆರೋಗ್ಯ ಹೆಚ್ಚಿಸುತ್ತದೆ. ಹೀಗಾಗಿ ಆರೋಗ್ಯಕರ ಮತ್ತು ದಟ್ಟ ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಒಡೆದ ತುದಿಗಳನ್ನು ಪೋಷಿಸುತ್ತದೆ.

    2. ಹರಳೆಣ್ಣೆ: ಹರಳೆಣ್ಣೆ ದಪ್ಪವಾದ ಮತ್ತು ಪೋಷಣೆಯ ಎಣ್ಣೆಯಾಗಿದ್ದು, ಇದು ನೆತ್ತಿಯನ್ನು ಮಾಯಿಶ್ಚರೈಸ್ ಮಾಡುವುದಲ್ಲದೆ ಆರೋಗ್ಯವಂತ ಕೂದಲ ಬೆಳವಣಿಗೆಗೆ ಉತ್ತೇಜಿಸುತ್ತದೆ. ಇದು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವುದಲ್ಲದೆ, ಕೂದಲ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇದರ ಆರ್ದ್ರ ಮತ್ತು ಮೃದುಗೊಳಿಸುವ ಗುಣಲಕ್ಷಣಗಳಿಂದಾಗಿ ಒಣ ಮತ್ತು ಚಿಪ್ಪು ನೆತ್ತಿಯನ್ನು ಪೋಷಿಸುವುದಲ್ಲದೆ, ಉದ್ದನೆಯ ದಟ್ಟ ಕೇಶರಾಶಿ ಹೊಂದಲು ನೆರವು ನೀಡುತ್ತದೆ.

    3. ಆಲಿವ್ ಆಯಿಲ್: ಆಲಿವ್ ಎಣ್ಣೆ ಕೂದಲಿಗೆ ಮತ್ತೊಂದು ಮಾಯಿಶ್ವರೈಸ್ ಎಣ್ಣೆಯಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿದೆ. ಈ ಎಣ್ಣೆಯಲ್ಲಿ ಒಲೀಕ್ ಆಮ್ಲದ ಉಪಸ್ಥಿತಿಯಿಂದಾಗಿ ಇದು ಕೂದಲನ್ನು ಬೇರುಗಳಿಂದ ಆಳವಾಗಿ ಪೋಷಿಸುತ್ತದೆ. ತಲೆಹೊಟ್ಟಿಗೆ ಈ ಎಣ್ಣೆ ಪರಿಣಾಮಕಾರಿ ಮದ್ದು. ಆಲಿವ್ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲು ನಯವಾಗಿ, ಮೃದುವಾಗುತ್ತದೆ.

    4. ಈರುಳ್ಳಿ ಎಣ್ಣೆ: ಈರುಳ್ಳಿಯು ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಈರುಳ್ಳಿ ಎಣ್ಣೆಯಲ್ಲಿ ಸಲ್ಫರ್ ಸಮೃದ್ಧವಾಗಿದೆ. ಇದು ಕೂದಲು ತೆಳುವಾಗುವುದನ್ನು ತಡೆಯತ್ತದೆ. ಈರುಳ್ಳಿ ಎಣ್ಣೆಯು ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ದಪ್ಪ ಮತ್ತು ಬಲವಾದ ಕೂದಲ ರಚನೆಗೆ ಕಾರಣವಾಗಿದೆ. ಆರೋಗ್ಯಕರ ಕೂದಲಿಗೆ ವರದಾನವಾಗಿರುವ ಈರುಳ್ಳಿ ಎಣ್ಣೆಯಿಂದ ಕೂದಲಿನ ಕಿರುಚೀಲಗಳು ಸಾಕಷ್ಟು ಪೋಷಣೆ ಪಡೆಯುತ್ತದೆ.

    5. ಬೇವಿನ ಎಣ್ಣೆ: ಬೇವಿನ ಎಣ್ಣೆ ಯುಗಯುಗಗಳಿಂದ ಎಲ್ಲರ ಅಚ್ಚುಮೆಚ್ಚಿನ ಎಣ್ಣೆಯಾಗಿದೆ. ಇದರ ಆಂಟಿಮೈಕ್ರೋಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ತುರಿಕೆಯಿಂದ ನೆತ್ತಿಯನ್ನು ಶಾಂತಗೊಳಿಸುತ್ತದೆ. ಇದು ಉತ್ತಮ ಮತ್ತು ವೇಗವಾಗಿ ಕೂದಲ ಬೆಳವಣಿಗೆಗೆ ಕೊಡುಗೆ ನೀಡುವ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಈ ಎಣ್ಣೆಯು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಜತೆಗೆ ಕೂದಲು ತೆಳುವಾಗುವುದು ಮತ್ತು ಒಡೆಯುವುದನ್ನು ತಡೆಯುತ್ತದೆ.

    6. ತೆಂಗಿನ ಎಣ್ಣೆ: ಬಹುಶಃ ನಿಮ್ಮ ಕೂದಲು ತೆಂಗಿನೆಣ್ಣೆಯ ಆರೈಕೆ ಇಲ್ಲದೆ ಇರಲಾರದು ಅಲ್ಲವೆ? ಸುಲಭವಾಗಿ ಕೈಗೆಟುಕುವ ತೆಂಗಿನೆಣ್ಣೆಯು ಕೂದಲಿಗೆ ಬಹುಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸುವುದಲ್ಲದೆ, ನಯವಾಗಿಸುತ್ತದೆ. ತೆಂಗಿನೆಣ್ಣೆಯಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ಕೂದಲನ್ನು ಬಲಪಡಿಸುತ್ತದೆ.

    7. ಬಾದಾಮಿ ಎಣ್ಣೆ: ಒಣ ಮತ್ತು ಹಾನಿಗೊಳಗಾದ ಕೂದಲಿಗೆ ಬಾದಾಮಿ ಎಣ್ಣೆ ಉತ್ತಮವಾಗಿದೆ. ಇದು ವಿಟಮಿನ್ ಎ, ಕೊಬ್ಬಿನಾಮ್ಲಗಳು ಮತ್ತು ಇತರ ಅಗತ್ಯ ಕೂದಲು ಉತ್ತೇಜಿಸುವ ಪ್ರೋಟಿನ್‌ಗಳನ್ನು ಒಳಗೊಂಡಿರುವುದರಿಂದ ಕೂದಲಿಗೆ ಅತ್ಯುತ್ತಮ ರಿಪೇರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಪೋಷಣೆಯ ಗುಣಗಳಿಂದಾಗಿ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿದೆ. ಬಾದಾಮಿ ಎಣ್ಣೆಯಲ್ಲಿರುವ ಮೆಗ್ನೀಸಿಯಂ ಕೂದಲು ತೆಳುವಾಗುವುದು ಮತ್ತು ಉದರುವಿಕೆಯ ವಿರುದ್ಧ ಹೋರಾಡುತ್ತದೆ.

    https://www.vijayavani.net/author/suchetana/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts