ಕ್ರಿಕೆಟ್​ ಮ್ಯಾಚನ್ನೇ ಕೆಲಕಾಲ ನಿಲ್ಲಿಸಿದ ಹಾವು; ಭಾರತ- ದಕ್ಷಿಣ ಆಫ್ರಿಕ ಪಂದ್ಯಕ್ಕೆ ಅಡ್ಡಿ

Cricket Snake
Published on

ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕ ನಡುವಿನ ಕ್ರಿಕೆಟ್ ಪಂದ್ಯವನ್ನು ಹಾವೊಂದು ಕೆಲವು ನಿಮಿಷಗಳ ನಿಲ್ಲಿಸಿದ ವಿದ್ಯಮಾನವೊಂದು ನಡೆದಿದೆ. ಭಾರತ, ದಕ್ಷಿಣ ಆಫ್ರಿಕ ನಡುವಿನ ಎರಡನೇ ಟಿ20 ಇನ್ನಿಂಗ್ಸ್​ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಇಂದು ಪಂದ್ಯ ನಡೆಯುತ್ತಿರುವಾಗ ಕೆಲವರು ಮಳೆ ಬರಬಹುದು ಎಂಬ ಯೋಚನೆಯಲ್ಲಿದ್ದರು. ಆದರೆ ಆ ಸಂದರ್ಭದಲ್ಲಿ ಹಾವು ಕ್ರೀಡಾಂಗಣಕ್ಕೇ ಬಂದುಬಿಟ್ಟಿತ್ತು.

ಭಾರತ ತಂಡ ಆಡುತ್ತಿದ್ದಾಗ ಹಾವನ್ನು ಗಮನಿಸಿದ ದಕ್ಷಿಣ ಆಫ್ರಿಕದ ಕೆಲವು ಆಟಗಾರರು ಕೂಡಲೇ ಕೆ.ಎಲ್.ರಾಹುಲ್ ಮತ್ತು ಫೀಲ್ಡ್​ನಲ್ಲಿದ್ದ ಅಂಪೈರ್​ ಗಮನಕ್ಕೆ ತಂದರು. ತಕ್ಷಣ ಅಗತ್ಯ ಉಪಕರಣಗಳನ್ನು ಹಿಡಿದು ಬಂದ ಪರಿಣತರು ಅದನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆಟಗಾರರು ಪಾನೀಯ ವಿರಾಮ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net