More

    ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಮತ್ತೊಂದು ಮಾಸ್ಟರ್​ ಪ್ಲ್ಯಾನ್​; ಉಳಿದ ಜಾಗದಲ್ಲಿ ಆಗಲಿರುವುದೇನು?

    ಅಯೋಧ್ಯೆ: ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದ್ದು, ಆ ಕುರಿತು ಕಾಮಗಾರಿಯೂ ಆರಂಭಗೊಂಡಿದೆ. ಮತ್ತೊಂದೆಡೆ ಅಲ್ಲಿಗೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಮತ್ತೊಂದು ಮಾಸ್ಟರ್​ ಪ್ಲ್ಯಾನ್​ ತಯಾರಿಸಿಕೊಂಡಿದೆ.

    ಭವ್ಯವಾದ ರಾಮಮಂದಿರ ನಿರ್ಮಾಣಗೊಂಡ ಬಳಿಕ ಉಳಿಯುವ ಜಾಗದಲ್ಲಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಮಾಸ್ಟರ್​ ಪ್ಲ್ಯಾನ್ ಸಿದ್ಧಪಡಿಸಲಾಗಿದೆ. ಅಂದರೆ ಆ ಜಾಗದಲ್ಲಿ ರಾಮಾಯಣ ಕಾಲದ ಋಷಿಗಳ ದೇವಸ್ಥಾನವೂ ನಿರ್ಮಾಣಗೊಳ್ಳಲಿದೆ. ಈ ಕುರಿತ ಮಾಸ್ಟರ್​ ಪ್ಲ್ಯಾನ್​ ಸಿದ್ಧವಾಗಿದ್ದು, ಅನುಮೋದನೆಯ ಅಂತಿಮ ಹಂತದಲ್ಲಿದೆ ಎಂಬುದಾಗಿ ಟ್ರಸ್ಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಸದ್ಯ ಸಜ್ಜಾಗಿರುವ ಮಾಸ್ಟರ್​ ಪ್ಲ್ಯಾನ್ ಪ್ರಕಾರ ಋಷಿವರ್ಯರಾದ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ಮಾತಾ ಶಬರಿ ಮುಂತಾದವರಿಗೂ ದೇವಾಲಯ ನಿರ್ಮಾಣಗೊಳ್ಳಲಿದೆ. ಇನ್ನುಳಿದ ಸ್ಥಳಗಳಲ್ಲಿ ಯಾತ್ರಿಗಳ ಸೌಲಭ್ಯಕ್ಕಾಗಿ ನಿರ್ಮಾಣಗಳು ನಡೆಯಲಿದ್ದು, ಯಾಗ ಮಂಟಪ, ಅನುಷ್ಠಾನ ಮಂಟಪ, ಸಂತ ನಿವಾಸ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ, ಗ್ರಂಥಾಲಯಗಳ ನಿರ್ಮಾಣಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. 2023ರ ಡಿಸೆಂಬರ್​ನಲ್ಲಿ ಮಂದಿರವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ.

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ‘ಇನ್ನೇನು ಪರಿಚಯ ರೊಮ್ಯಾನ್ಸ್​ಗೆ ತಿರುಗಬೇಕು ಎನ್ನುವಷ್ಟರಲ್ಲಿ…’: ಹೀಗಂದಿದ್ದೇಕೆ ಅನೂಪ್​ ಭಂಡಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts