More

  ಸರ್ಕಾರಗಳಿಂದ ರೈತ ವಿರೋಧಿ ಆಡಳಿತ : ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

  ಚಳ್ಳಕೆರೆ: ರೈತ ವಿರೋಧಿ ಆಡಳಿತ ಮಾಡುವ ಸರ್ಕಾರಗಳಿಂದ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಯಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.

  ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, 1990ರ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಕಾಲವಾಗಿತ್ತು. ಬೆಳೆನಷ್ಟ ಮತ್ತು ಸಾಲದ ಬಾಧೆಯಿಂದ ಆತ್ಮಹತ್ಯೆ ಈಗಲೂ ಆಗುತ್ತಿದೆ ಎಂದರು.

  ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿಯಾಗಿ ಆಡಳಿತ ಮಾಡುತ್ತಿವೆ. ಎಪಿಎಂಸಿ, ಭೂ ಸುಧಾರಣೆ ಮತ್ತು ವಿದ್ಯುತ್ ವಿರೋಧಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುತ್ತಿಲ್ಲ. ಚುನಾವಣಾ ಪ್ರಚಾರಗಳಲ್ಲಿ ರೈತಪರ ಯಾವುದೇ ಘೋಷಣೆ ಮಾಡಿಲ್ಲ ಎಂದು ಹೇಳಿದರು.

  ಮುಖಂಡರಾದ ಓಬಯ್ಯ, ಧನಂಜಯ ಆರಾಧ್ಯ, ಪಾತಣ್ಣರೆಡ್ಡಿ, ಜೆ.ಎಸ್.ಯರ‌್ರಿಸ್ವಾಮಿ, ಕೆ.ಸಿ.ಶ್ರೀಕಂಠಮೂರ್ತಿ, ಎಂ.ಎಸ್.ಚನ್ನಕೇಶವಮೂರ್ತಿ, ಆರ್.ಬಸವರಾಜ, ತಿಪ್ಪೇಸ್ವಾಮಿಗೌಡ, ಮೈರಾಡ ಚಂದ್ರಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts