ಹೌದು, ಸಿನಿಮಾ ಹಾಲ್ಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳದ್ದೇ ಆಳ್ವಿಕೆ ಎಂದರೆ ತಪ್ಪಾಗುವುದಿಲ್ಲ. ಈಗಾಗಲೇ, ಕನ್ನಡದ 'ಹರೀಶ್ ವಯಸ್ಸು 36' ಸಿನಿಮಾಗೆ ಸ್ಕ್ರೀನ್ಗಳು ಇಲ್ಲ ಎಂಬ ಮಾತನ್ನು ಸ್ವತಃ ಆ ಸಿನಿಮಾದ ನಿರ್ದೇಶಕರ ಬಾಯಿಂದ ಇಡೀ ರಾಜ್ಯದ ಜನತೆ ಕೇಳಿದ್ದಾರೆ. ಇದೀಗ, ಏಪ್ರಿಲ್ 1 ರಂದು ಬಿಡುಗಡೆಯಾಗಬೇಕಿದ್ದ ಕನ್ನಡ ಚಿತ್ರ 'ತ್ರಿಕೋನ' ಚಿತ್ರ ಬಿಡುಗಡೆಯನ್ನು, ಚಿತ್ರಮಂದಿರಗಳು ಲಭ್ಯವಿಲ್ಲದ ಕಾರಣ ಏಪ್ರಿಲ್ 8 ಕ್ಕೆ ಮುಂದೂಡಲಾಗಿದೆ. ಇದಿಷ್ಟೇ ಅಲ್ಲ, ಏಪ್ರಿಲ್ 1 ಕ್ಕೆ ರಿಲೀಸ್ ಆಗಲಿರುವ ದಿವಂಗತ ನಟ ಸಂಚಾರಿ ವಿಜಯ್ ಅವರ ಕೊನೆಯ 'ತಲೆದಂಡ' ಸಿನಿಮಾದ ಬಿಡುಗಡೆಯನ್ನು ಕೂಡಾ ಮುಂದೂಡುವ ಯೋಚನೆಯನ್ನು ಈ ಚಿತ್ರತಂಡ ಮಾಡುತ್ತಿದೆ ಎಂಬ ಮಾಹಿತಿ ಇದೆ.