More

    ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್​ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?

    ಬೆಂಗಳೂರು:ಕೆಜಿಎಫ್ 2′ ಚಿತ್ರ ತೆರೆಗೆ ಬರೋಕೆ ಇನ್ನು ಕೇವಲ 16 ದಿನಗಳು ಇವೆ. ಹಾಗಾಗಿ, ನಿನ್ನೆ ಮಾರ್ಚ್ 27 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಆ ಬಹುನಿರೀಕ್ಷಿತ ಟ್ರೈಲರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಹಾಗಾದರೆ, ರಿಲೀಸ್​ಗೂ ಮುನ್ನ ಸಿನಿಮಾ ನೋಡಿದ ನಟಿ ರಾಧಿಕಾ ಪಂಡಿತ್ ಎಷ್ಟು ಥ್ರಿಲ್ ಆಗಿರಬೇಕು ಅಂತ ಒಮ್ಮೆ ಯೋಚಿಸಿ. ಹೀಗಾಗಿ, ರಿಲೀಸ್​ಗೂ ಮುನ್ನ ಸಿನಿಮಾ ನೋಡಿದ ನಟ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ಅವರ ಅಭಿಪ್ರಾಯವನ್ನು ಬಿಚ್ಚಿಟ್ಟಿದ್ದಾರೆ.
    ಹೌದು, ‘ಕೆಜಿಎಫ್ 2′ ವೀಕ್ಷಿಸಿದ ನಟಿ ರಾಧಿಕಾ ಪಂಡಿತ್ ಅವರು ಮೊದಲಿಗೆ ಈ ಸಿನಿಮಾ ಅವರಿಗೆ ನಿಜಕ್ಕೂ ಇಷ್ಟವಾಗಿದೆ ಎಂದಿದ್ದಾರೆ. ಅಂದಹಾಗೆ, ನಟ ಯಶ್ ಅವರು ಮಾತನಾಡಿದ ಬಳಿಕ ರಾಧಿಕಾ ವೇದಿಕೆಯ ಮೇಲೆ ಮಾತನಾಡಿದ್ದು, ”ನನ್ನ ಪತಿಯ ಸಿನಿಮಾ ಎಂದು ನಾನು ಹೊಗಳುತ್ತಿಲ್ಲ. ‘ಕೆಜಿಎಫ್ಎನ್ನುವ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಪ್ರೀತಿ ಇದೆ. ನಾನು ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾವನ್ನು ನಾನು ನಿಜಕ್ಕೂ ಇಷ್ಟಪಟ್ಟೆಎಂದು ತಿಳಿಸಿದ್ದಾರೆ.
    ಬಳಿಕ ತಮ್ಮ ಮಾತು ಮುಂದುವರಿಸಿದ ನಟಿ ರಾಧಿಕಾ ಪಂಡಿತ್, ”ಕೆಜಿಎಫ್ 2 ಸಿನಿಮಾಗೆ ಕೆಲಸ ಮಾಡಿದ ಎಲ್ಲರೂ ಅದಕ್ಕೆ ಒಂದೊಂದು ಆಧಾರ ಸ್ತಂಭಗಳಂತೆ. ನಟಿ ಶ್ರೀ ನಿಧಿ ಅಂತೂ ಸಿನಿಮಾದಲ್ಲಿ ನೋಡಲು ತುಂಬಾ ಚೆನ್ನಗಿದ್ದಾರೆ. ‘ಗುಸ್ ಕೆ ಮಾರೆಂಗ್ಎಂಬ ನಟಿ ರವೀನಾ ಮೇಡಂ ಅವರ ಡೈಲಾಗ್ ಅಂತೂ ಸೂಪರ್. ಸಂಜಯ್ ಸರ್ ಅವರ ಹೊಸ ಲುಕ್ ಕೂಡಾ ನಿಜಕ್ಕೂ ಗ್ರೇಟ್. ಏಪ್ರಿಲ್ 14 ರಂದು ‘ಕೆಜಿಎಫ್ 2’ ಎಂಬ ಹಬ್ಬ ಆಚರಿಸೋಕೆ ರೆಡಿಯಾಗಿರಿಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts