ಇದೇ ವೇಳೆ ಸಂಜಯ್ ದತ್ ಅವರನ್ನು ರಾಘವೇಂದ್ರ ರಾಜ್ಕುಮಾರ್ ಕುಟುಂಬ ಸ್ವಾಗತಿಸಿತ್ತು. ಇನ್ನು, ಕೆಲ ಹೊತ್ತು ನಟ ಸಂಜಯ್ ದತ್ ಅವರೊಂದಿಗೆ ರಾಘವೇಂದ್ರ ರಾಜ್ಕುಮಾರ್ ಅವರ ಕುಟುಂಬ ಮಾತುಕತೆ ನಡೆಸಿದ್ದಾರೆ. ಜತೆಗೆ, ನಟ ಸಂಜಯ್ ದತ್ ಜೊತೆಗೆ ನಟ ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪುತ್ರರು ನಟ ಯವರಾಜ್ಕುಮಾರ್, ನಟ ವಿನಯ್ ರಾಜ್ಕುಮಾರ್, ರಾಘಣ್ಣನ ಪತ್ನಿ ಮಂಗಳಾ ಅವರು ಫೋಟೋ ತೆಗೆಸಿಕೊಂಡಿದ್ದು, ಅವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇನ್ನು, 'ಕೆಜಿಎಫ್ 2' ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಹೋಗದೆ ಮೊದಲು ದುಖದಲ್ಲಿರುವ ಪುನೀತ್ ರಾಜ್ಕುಮಾರ್ ಕುಟುಂಬವನ್ನು ಭೇಟಿ ಮಾಡಿದ್ದಕ್ಕೆ ನಟ ಸಂಜಯ್ ದತ್ ಅವರನ್ನು ಅಭಿಮಾನಿಗಳು ಹೊಗಳಿದ್ದಾರೆ. ನಟ ಸಂಜಯ್ ದತ್ ಅವರು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, 'ಕೆಜಿಎಫ್ 2' ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್, ಬಾಲಿವುಡ್ ನಟ ಫರ್ಹಾನ್ ಅಖ್ತರ್ ಕೂಡಾ ಬೆಂಗಳೂರಿಗೆ ಆಗಮಿಸಿದ್ದು, ಅವರ ಕೆಲ ಫೋಟೋಗಳು ಸಹ ವೈರಲ್ ಆಗಿವೆ.