More

    25 ಲಕ್ಷಕ್ಕಾಗಿ ರಾಜಕಾರಣಿ ಜತೆ ಮಲಗಿದ್ರಾ ತ್ರಿಷಾ? ಸಂಚಲನ ಸೃಷ್ಟಿಸಿದ ಹೇಳಿಕೆ, ಸೌತ್​ ಬ್ಯೂಟಿ ತಿರುಗೇಟು ಹೀಗಿತ್ತು…

    ಚೆನ್ನೈ: ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    Trisha 1

    ಇತ್ತೀಚೆಗಷ್ಟೇ ಅವರ ನಟನೆಯ ಪೊನ್ನಿಯನ್​ ಸೆಲ್ವನ್​ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ವಯಸ್ಸು 40 ಆದ್ರೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು.

    ತಾಜಾ ಸಂಗತಿ ಏನೆಂದರೆ, ತ್ರಿಷಾ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡುವ ವದಂತಿಯೊಂದು ಹರಿದಾಡುತ್ತಿದೆ. ಕೆಲ ತಿಂಗಳ ಹಿಂದಷ್ಟೇ ನಟ ಮನ್ಸೂರ್​ ಅಲಿ ಖಾನ್​ ತ್ರಿಷಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಲಿಯೋ ಚಿತ್ರದಲ್ಲಿ ತ್ರಿಷಾ ಜತೆ ರೇಪ್​ ಸೀನ ಇರಬೇಕಿತ್ತು ಎನ್ನುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿ ಕೊನೆಗೆ ಕ್ಷಮೆಯಾಚಿಸಿದರು. ಇದೀಗ ತಮಿಳುನಾಡಿನ ರಾಜಕಾರಣಿಯೊಬ್ಬ ತ್ರಿಷಾ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇದು ತಮಿಳುನಾಡಿನಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ.

    Trisha 2

    25 ಲಕ್ಷ ರೂ.ಗಾಗಿ ರಾಜಕಾರಣಿ ಜತೆ ಮಲಗಿದ್ರಾ?
    ತಮಿಳುನಾಡು ರಾಜಕಾರಣಿ ಎ.ವಿ. ರಾಜು, ತ್ರಿಷಾ ವಿರುದ್ಧ ಕೀಳಾಗಿ ಮಾತನಾಡಿದ್ದಾರೆ. ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ಜಿ. ವೆಂಕಟಾಚಲಂ ಅವರನ್ನು ಟೀಕಿಸುವ ಭರದಲ್ಲಿ ಎ.ವಿ. ರಾಜು, ಹಣಕ್ಕಾಗಿ ರಾಜಕಾರಣಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸಿದ್ಧರಾಗಿರುವ ನಾಯಕಿಯರ ಅಕ್ರಮಗಳ ಬಗ್ಗೆ ಮಾತನಾಡಿದರು. ಕಟುವಾದ ವಾಗ್ದಾಳಿ ಮಾಡುತ್ತಲೇ ತ್ರಿಷಾ ವಿಚಾರವನ್ನು ಪ್ರಸ್ತಾಪ ಮಾಡಿದ ರಾಜು, ತ್ರಿಷಾ 25 ಲಕ್ಷ ರೂಪಾಯಿಗಾಗಿ ರಾಜಕಾರಣಿಯ ಜತೆ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

    ರಾಜು ಕಾಮೆಂಟ್​ ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದಾರೆ. ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದು ಎಂದಿದ್ದಾರೆ. ಇನ್ನೂ ಕೆಲವರು ಈ ವಿಷಯದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡದಿದ್ದಕ್ಕಾಗಿ ನಟಿ ತ್ರಿಷಾ ಅವರನ್ನೂ ಟೀಕಿಸಿದ್ದಾರೆ.

    Trisha 3
    ನಟಿ ತ್ರಿಷಾ ಮತ್ತು ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ. ರಾಜು

    ಮೌನ ಮುರಿದ ತ್ರಿಷಾ
    ರಾಜಕಾರಣಿ ರಾಜು ಹೇಳಿಕೆಗೆ ಕೊನೆಗೂ ಪ್ರತಿಕ್ರಿಯೆ ನೀಡಿರುವ ತ್ರಿಷಾ, ಎಲ್ಲರ ಗಮನ ಸೆಳೆಯಲು ಯಾವುದೇ ಮಟ್ಟಕ್ಕೆ ಇಳಿಯುವ ಕೀಳು ಜೀವನ ಮತ್ತು ತಿರಸ್ಕಾರದ ಮನುಷ್ಯರನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಖಚಿತವಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಮುಂದೆ ಏನು ಹೇಳಬೇಕು ಮತ್ತು ಏನು ಮಾಡಬೇಕು ಎಲ್ಲವನ್ನು ನನ್ನ ಕಾನೂನು ವಿಭಾಗ ನೋಡಿಕೊಳ್ಳುತ್ತದೆ ಎಂದು ತ್ರಿಷಾ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಅವರು ಮೆಗಾಸ್ಟಾರ್​ ಚಿರಂಜೀವಿ ನಟನೆಯ ವಿಶ್ವಂಭರಂ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತಮಿಳು ಸಿನಿಮಾಗಳಾದ ವಿದ ಮುಯರ್ಚಿ, ಥಗ್​ ಲೈಫ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೋಹನ್​ಲಾಲ್​ ನಟನೆಯ ರಾಮ್​ ಹೆಸರಿನ ಮಲಯಾಳಂ ಸಿನಿಮಾಗೂ ತ್ರಿಷಾ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

    ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

    ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts