More

  ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

  ಮಂಡ್ಯ: ನಟ ದರ್ಶನ್​ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಫೆ.17ರಂದು ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ದರ್ಶನ್​ ಆಡಿದ ಕೆಲ ಮಾತುಗಳಿಗೆ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಆಕ್ರೋಶ ಹೊರಹಾಕಿದ್ದು, ಏಕವಚನದಲ್ಲೇ ದರ್ಶನ್​ ಅವರನ್ನು ನಿಂದಿಸಿದ್ದಾರೆ.

  ಮೊದಲು ದರ್ಶನ್​ ಏನು ಹೇಳಿದರು ಎಂಬುದನ್ನು ನೋಡೋಣ. ಚಿತ್ರರಂಗ, ರಾಜಕೀಯ, ಬ್ಯುಸಿನೆಸ್ ಯಾವುದೇ ಆಗಿರಲಿ ಶ್ರಮ ಇರಲೇ ಬೇಕು. ಶ್ರದ್ಧೆ ಬೇಕೇಬೇಕು. ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇಬೇಕು. ಅವಮಾನಗಳು ಆದರೇನೆ ಸನ್ಮಾನ. ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೇ ಮುಖ್ಯ. ತಿರುಪತಿಗೆ ಕೆಂಪು ಬಸ್ಸಿನಲ್ಲಿ (ಕೆಎಸ್​ಆರ್​ಟಿಸಿ) ಹೋಗಿದ್ದೆ. ಆದರೆ, ಇಂದು ಕಾರಿನಲ್ಲಿ ಹೋಗುತ್ತಿದ್ದೇನೆ. ಇದಕ್ಕಿಂತ ದೇವರ ಬಳಿ ಇನ್ನೇನು ಕೇಳಲಿ. ಇಷ್ಟೇ ಸಾಕು. ಜೀವನದಲ್ಲಿ ಯಾರಿಗೂ ತಲೆ ಹಿಡಿಬೇಡಿ ಮತ್ತು ತಲೆ ಹೊಡಿಬೇಡಿ, ಒಳ್ಳೆಯ ಗುರಿ ಇಟ್ಟುಕೊಳ್ಳಿ, ಶ್ರಮ ಪಡಿ ಜಯ ಸಿಗುತ್ತದೆ ಎಂದು ದರ್ಶನ್​ ಹೇಳಿದ್ದರು.

  ಅಹೋರಾತ್ರ ಆಕ್ರೋಶಕ್ಕೆ ಕಾರಣವೇನು?
  ದರ್ಶನ್​ ಮಾತುಗಳನ್ನು ಕೇಳಿ ರೊಚ್ಚಿಗೆದ್ದಿರುವ ಅಹೋರಾತ್ರ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ವಿರುದ್ಧ ಹರಿಹಾಯ್ದಿದ್ದಾರೆ. ಅಸಭ್ಯ ಪದಗಳಿಂದಲೇ ಮಾತು ಆರಂಭಿಸಿದ ಅಹೋರಾತ್ರ, ನೀನು ಹೆಣ್ಣನ್ನು ಅಗೌರವಿಸುವಂಥವನು, ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು, ಹೆಣ್ಣನ್ನು ಅಶ್ಲೀಲ ಪದಗಳಿಂದ ಕರೆದವನು ನೀನು. ತಲೆ ಹಿಡಿಬೇಡಿ, ತಲೆ ಹೊಡಿಯಬೇಡಿ ಎನ್ನುವ ನೀವು ಸಾಚಾನಾ? ಇನ್ನೊಬ್ಬರಿಗೆ ಬುದ್ಧಿ ಹೇಳಲು ನಿನಗೇನು ಅರ್ಹತೆ ಇದೆ? ನೀನು ಗಂಡಲ್ಲ ಎಂದು ಹೇಳುವುದಕ್ಕೆ ಒಂದೇ ಸಾಕ್ಷಿ, ಅದೇನೆಂದರೆ ನೀನು ಹೆಣ್ಣನ್ನು ಅಗೌರವಿಸುತ್ತೀಯಾ! ನಿನಗೆ ಮಾನ-ಮರ್ಯಾದೆ ಇದೆಯಾ? ಭಾಷಣದಲ್ಲಿ ನೀನು ಹೇಳಿದ್ದೇನು? ಇವತ್ತು ಅವಳು, ನಾಳೆ ಇವಳು ಅಂದ್ರೆ ನಿನ್ನ ಭಾವನೆಯಲ್ಲಿ ಹೆಣ್ಣೆಂದರೆ ಏನು? ನಿನ್ನ ಸ್ವಂತ ಧರ್ಮಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಾನೋ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

  ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ
  ನನ್ನ ಪ್ರೀತಿಯ ಕೋರಿಕೆಗೆ ಬೆಲೆಕೊಟ್ಟು ಶಾಂತ ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಹಕರಿಸಿದ ಅಭಿಮಾನಿ ವರ್ಗಕ್ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಪ್ರಿಯ ಬಂಧು-ಮಿತ್ರರು, ಚಿತ್ರರಂಗದ ಸ್ನೇಹಿತರು, ಎಲ್ಲಾ ಮೀಡಿಯಾ ಮಿತ್ರರು, ರಾಜಕೀಯ ಗಣ್ಯರು, ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಅನಂತ ಅನಂತ ವಂದನೆಗಳು. ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳು. ಈ ನಿಮ್ಮ ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಧನ್ಯೋಸ್ಮಿ ಕರ್ನಾಟಕ ಎಂದು ನಟ ದರ್ಶನ್ ಇಂದು (ಫೆ. 19) ಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ.​

  ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

  ವಿಶ್ವದ ಅತಿದೊಡ್ಡ ಹಾವು ಹಸಿರು ಅನಕೊಂಡದ ಹೊಸ ಪ್ರಭೇದ ಕಂಡು ಅಚ್ಚರಿಗೀಡಾದ ಸಂಶೋಧಕರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts