More

    ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್?

    ಹೈದರಾಬಾದ್: ಸಾಮಾನ್ಯ ವ್ಯಕ್ತಿ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಬೇಕು ಅಂದರೆ ಅದು ಅಷ್ಟು ಸುಭವಲ್ಲ. ಆದರೆ, ಸಿನಿತಾರೆಯರ ಮಕ್ಕಳು ಮಾತ್ರ ಚಿತ್ರರಂಗಕ್ಕೆ ಕಾಲಿಡೋದು ಸುಲಭ. ಹೀಗಿದ್ದರೂ, ಅಂತಹ ಸಿನಿತಾರೆಯರ ಎಲ್ಲಾ ಮಕ್ಕಳಿಗೂ ಅವರ ತಂದೆತಾಯಿಯಂತೆ ಟ್ಯಾಲೆಂಟ್ ಇದ್ದು ಸಿನಿರಂಗಕ್ಕೆ ಬಂದಿದ್ದಾರೆ, ಜತೆಗೆ ಉಳಿದುಕೊಂಡಿದ್ದಾರೆ, ಹೆಸರು ಮಾಡುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ಇನ್ನು, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಮಕ್ಕಳು ಬಾಲ ಕಲಾವಿದರಾಗಿ ಗುರುತಿಸಿಕೊಂಡು, ಬಳಿಕ ನಾಯಕ-ನಾಯಕಿಯರಾಗಿ ಮಿಂಚುತ್ತಿರುವದು ಹೆಚ್ಚಾಗಿದೆ.
    ಈಗ, ಟಾಲಿವುಡ್​ನ ನಟ ಪ್ರಿನ್ಸ್ ಮಹೇಶ್ ಬಾಬು ಹಾಗೂ ಮಾಜಿ ಮಿಸ್ ಇಂಡಿಯಾ ನಮ್ರತಾ ಶಿರೋಡ್ಕರ್ ಅವರ ಮಗಳು ಸಿತಾರಾ ಘಟ್ಟಮನೇನಿ ಕೂಡಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಹೌದು, ಮಹೇಶ್ ಅವರ ಮಗಳು ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. 9 ವರ್ಷದ ಸಿತಾರಾ ಅವರಿಗೆ ತಮ್ಮದೇ ಯೂಟ್ಯೂಬ್ ಚಾನೆಲ್ ಇರುವ ಕಾರಣ, ಅದರಲ್ಲಿ ಹಲವಾರು ಸ್ಟಾರ್​ಗಳನ್ನು ಇಂಟರ್​ವ್ಯೂವ್ ಮಾಡಿದ್ದಾರೆ. ಮತ್ತು ಆಕೆ ಬಹಳಷ್ಟು ಒಳ್ಳೆಯ ಡ್ಯಾನ್ಸರ್ ಎಂಬ ವಿಚಾರವೂ ಹಲವರಿಗೆ ತಿಳಿದಿದೆ.
    ಇದೀಗ, ಈ ಸೂಪರ್ ಟ್ಯಾಲೆಂಟೆಡ್ ಸಿತಾರಾ ಅವರು ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹೌದು, ನಟ ಮಹೇಶ್​ ಬಾಬು ನಟನೆಯ ಮುಂಬರುವ ‘ಸರ್ಕಾರು ವಾರಿ ಪಾಟ’ ಸಿನಿಮಾದ ‘ಪೆನ್ನಿ…’ ಎಂಬ ಒಂದು ಸಾಂಗ್ ಮಾರ್ಚ್ 20 ರಂದು ರಿಲೀಸ್​ ಆಗಿದೆ. ಈ ಹಾಡಿನಲ್ಲಿ ಸಿತಾರಾ ಅವರು ಸ್ಪೆಷಲ್ ಎಂಟ್ರಿಯಲ್ಲಿ ಮಿಂಚಿದ್ದಾರೆ. ಅಂದಹಾಗೆ, ಸಿತಾರಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಿತಾರಾ ಅವರನ್ನು ಬರೋಬ್ಬರಿ 6.7 ಲಕ್ಷ ಮಂದಿ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಸಿತಾರಾ, ತಂದೆ ಹಾಗೂ ತಾಯಿಯಂತೆ ಬಲು ಸುಂದರ ಎಂದರೂ ತಪ್ಪಾಗುವುದಿಲ್ಲ.
    ಈಗ ‘ಪೆನ್ನಿ..’ ಹಾಡಿನಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು ಅನುಯಾಯಿಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಲೆ ಇದೆ. ‘ಪೆನ್ನಿ..’ ಹಾಡಿನಲ್ಲಿ ಸಿತಾರಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಸ್ಟೆಪ್​ಗಳು ಮತ್ತು ಗ್ರೇಸ್ ನೋಡಿದ ಮಹೇಶ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸಿತಾರಾ ಮುಂದೆ ದೊಡ್ಡ ಸ್ಟಾರ್ ನಟಿಯಾದರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಬೇರೆ ಸೆಲೆಬ್ರಿಟಿಗಳು. ಈ ಹಿಂದೆ ನಟ ಮಹೇಶ್ ಬಾಬು ಅವರ ಮಗ ಗೌತಮ್ ಘಟ್ಟಮನೇನಿ ಕೂಡಾ ತಂದೆಯ ‘ನೆನೊಕ್ಕಡಿನೆ’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದರು. 

    ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್? ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್?

    5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ…

    ಅದೊಂದು ಮುಜುಗರ: 20 ಕೆ.ಜಿ ತೂಕ ಇಳಿಸಿರುವ ಹಿಂದಿನ ರಹಸ್ಯ ಬಿಚ್ಚಿಟ್ಟ 51ರ ಖುಷ್ಬೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts