

ಶಿರಸಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಶಿರಸಿಯ ಮಹಿಳೆಯೊಬ್ಬರು ದೂರದ ಅಮೆರಿಕಾದಿಂದ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೆರಿಕಾದಿಂದ ಆಗಮಿಸಿದ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಮತದಾನ ಮಾಡಿ ಕಾನಗೋಡ ಮತಗಟ್ಟೆ ಮೂಲಕ ಹಕ್ಕು ಚಲಾಯಿಸಿದರು.
ಮತದಾನ ನಡೆಸುವ ಸಲುವಾಗಿಯೇ ಅಶ್ವಿನಿ ರಾಜಶೇಖರ ಭಟ್ ದೂರದ ಅಮೆರಿಕಾದಿಂದ ಆಗಮಿಸಿದ. ಕಾನಗೋಡ್ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿ ಸಂಭ್ರಮಿಸಿದ್ದಾರೆ.
ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಮತದಾರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.