More

    ಮತಗಟ್ಟೆ ಮುಂದೆ ಧರಣಿ ಕುಳಿತ ಅಜ್ಜಿ! ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

    ಗದಗ: ಮತದಾನ ಮಾಡಲು ಬಂದಿದ್ದ ಅಜ್ಜಿಯೊಬ್ಬಳು ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದಿದೆ.

    85 ವರ್ಷದ ಮುಕ್ತುಂಬೀ ದೊಡ್ಡಮನಿ ಹೆಸರಿನ ಅಜ್ಜಿ ಮತ ಚಲಾಯಿಸಲು ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ಆಗಮಿಸಿದ್ದರು. ಆದರೆ, ಚುನಾವಣಾ ಅಧಿಕಾರಿಗಳು ಮೊಮ್ಮಗನನ್ನು ಅಜ್ಜಿಯ ಜೊತೆಗೆ ಬಿಡಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಅಜ್ಜಿ ತೋರಿಸಿದ ಚಿಹ್ನೆಗೆ ಮತ ಹಾಕದೆ ಬೇರೆ ಗುರುತಿಗೆ ಅಧಿಕಾರಿಗಳು ಮತಹಾಕಿಸಿದ್ದಾರೆ ಎಂದು ಅಜ್ಜಿ ಗಂಭೀರ ಆರೋಪ ಮಾಡಿದ್ದಾರೆ.

    ಕೂಡಲೇ ಸ್ಥಳಕ್ಕೆ ತಹಸೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಅಜ್ಜಿ ಪಟ್ಟು ಹಿಡಿದಿದ್ದಾರೆ. ಮತಗಟ್ಟೆಯ ಮುಂದೆಯೇ ಅಜ್ಜಿ ಧರಣಿ ಕುಳಿತಿದಿದ್ದಾರೆ.

    ಇದನ್ನೂ ಓದಿ: ಕಾರು ಪಲ್ಟಿ: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಸಹೋದರನಿಗೆ ಗಂಭೀರ ಗಾಯ

    ರಾಜ್ಯದಲ್ಲಿ ಮತದಾನ ಚುರುಕಾಗಿ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 8.02 ರಷ್ಟು ಮತದಾನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಮಾಹಿತಿ ಮಾಹಿತಿ ನೀಡಿದೆ. ಅಂಕಿ-ಅಂಶಗಳನ್ನು ನೋಡಿದರೆ ಈ ಬಾರಿಯ ಮತದಾನಕ್ಕೆ ಉತ್ತಮ ಆರಂಭ ಸಿಕ್ಕಿದೆ.

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    ಕರ್ನಾಟಕ ಚುನಾವಣೆ 2023: ಉತ್ತಮ ಆರಂಭ, 9 ಗಂಟೆಯವರೆಗೆ ಶೇ. 8 ರಷ್ಟು ಮತ ಚಲಾವಣೆ

    ಮತದಾನ ಮಾಡಿದ ರಕ್ಷಿತ್ ಶೆಟ್ಟಿ; ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ ಎಂದ ಸಿಂಪಲ್ ಸ್ಟಾರ್

    ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts