More

    ಕರ್ನಾಟಕ ಚುನಾವಣೆ 2023: ಉತ್ತಮ ಆರಂಭ, 9 ಗಂಟೆಯವರೆಗೆ ಶೇ. 8 ರಷ್ಟು ಮತ ಚಲಾವಣೆ

    ಬೆಂಗಳೂರು: ಕಳೆದ ಬಾರಿ ಕಳೆಗುಂದಿದ್ದ ಮತದಾನಕ್ಕೆ ಈ ಬಾರಿ ಹೊಸ ಕಳೆ ಬಂದಂತಿದೆ. ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಉತ್ತರ ಆರಂಭ ದೊರೆತಿದೆ.

    ರಾಜ್ಯದಲ್ಲಿ ಮತದಾನ ಚುರುಕಾಗಿ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 8.02 ರಷ್ಟು ಮತದಾನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಮಾಹಿತಿ ಮಾಹಿತಿ ನೀಡಿದೆ. ಅಂಕಿ-ಅಂಶಗಳನ್ನು ನೋಡಿದರೆ ಈ ಬಾರಿಯ ಮತದಾನಕ್ಕೆ ಉತ್ತಮ ಆರಂಭ ಸಿಕ್ಕಿದೆ.

    ಇದನ್ನೂ ಓದಿ: LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ

    ಬೆಂಗಳೂರು ಉತ್ತರದಲ್ಲಿ ಶೇ 7.55, ಬೆಂಗಳೂರು ದಕ್ಷಿಣದಲ್ಲಿ ಶೇ. 6.45, ಬೆಂಗಳೂರು ಕೇಂದ್ರ ಶೇ. 7.89, ಬೆಂಗಳೂರು ಗ್ರಾಮಾಂತರ ಶೇ. 7.72, ಬೆಂಗಳೂರು ನಗರ ಶೇ. 9.11 ರಷ್ಟು ಮತದಾನವಾಗಿದೆ.

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ

    ಮತದಾನ ನಡುವೆಯೇ ಚಿತ್ರದುರ್ಗ JDS​ ಅಭ್ಯರ್ಥಿಗೆ ಶಾಕ್: ಚುನಾವಣಾ ಅಧಿಕಾರಿಗಳಿಂದ 58 ಲಕ್ಷ ರೂ. ವಶ

    ಬಂಜಾರ ಸಮುದಾಯದ ಸಾಂಪ್ರದಾಯಿಕ ದಿರಿಸಿನಲ್ಲೇ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts