More

    ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ

    ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ನಗರದ ಬಾದಾಮ್ ಕುಟುಂಬದ ಸದಸ್ಯರು ಪ್ರತಿವರ್ಷವು ತಮ್ಮ ಹಕ್ಕನ್ನು ಕುಟುಂಬ ಸಮೇತರಾಗಿ ಬಂದು ಚಲಾಯಿಸುತ್ತಾರೆ. ಈ ಕುಟುಂಬ ಈವರೆಗೆ 15ಕ್ಕಿಂತ ಹೆಚ್ಚು ಬಾರಿ ಮತದಾನ‌ ಮಾಡಿದೆ.

    CKB Vote 1 (2)

    ಪ್ರತಿನಿತ್ಯ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ‌ ತೊಡಗಿಕೊಂಡು ತಮ್ಮದೆಯಾದ ಬಿಜಿ‌ ಲೈಫ್​ ನಡೆಸುತ್ತಿದ್ದರೂ ಮತದಾನ‌ ಹಕ್ಕಿಗೆ ಗೌರವ ಸೂಚಿಸಲು ಪ್ರತಿವರ್ಷವೂ ಒಟ್ಟಿಗೆ ಮತದಾನ ಮಾಡಿಕೊಂಡು ಬರುತ್ತಿರುವುದಾಗಿ ಬಾದಾಮ್ ಕುಟುಂಬದ ಮುಖಂಡರು‌ ಸಂತಸ ವ್ಯಕ್ತಪಡಿಸಿದ್ದಾರೆ.

    CKB Vote 1 (1)

    ಚಿಕ್ಕಬಳ್ಳಾಪುರ ‌ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯು ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದೆ. ಮತಗಟ್ಟೆಗಳ‌ ಬಳಿ ಪೊಲೀಸ್ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    LIVE| ಕರ್ನಾಟಕ ಚುನಾವಣೆ 2023: ರಾಜ್ಯಾದ್ಯಂತ ಮತದಾನ ಆರಂಭ, ಇಲ್ಲಿದೆ ನೇರಪ್ರಸಾರ

    ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಕರೆ ಕೊಟ್ಟ ಪ್ರಧಾನಿ ಮೋದಿ

    ನಮ್ಮನ್ನು ನೋಡಿ ಕಲಿಯಿರಿ… ಮತಚಲಾಯಿಸಿದ ಬಳಿಕ ಯುವಕರಿಗೆ ಕರೆ ಕೊಟ್ಟ ಸುಧಾಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts