ನಮ್ಮನ್ನು ನೋಡಿ ಕಲಿಯಿರಿ… ಮತಚಲಾಯಿಸಿದ ಬಳಿಕ ಯುವಕರಿಗೆ ಕರೆ ಕೊಟ್ಟ ಸುಧಾಮೂರ್ತಿ

Sudhamurthy
Published on

ಬೆಂಗಳೂರು: ಯುವಕರು ತಪ್ಪದೇ ಮತದಾನ ಮಾಡುವಂತೆ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕರೆ ನೀಡಿದ್ದಾರೆ.

ಕುಟುಂಬ ಸಮೇತರಾಗಿ ಬಂದು ಜಯನಗರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ ಬಳಿಕ ಸುದ್ದಿಗಾರರ ಬಳಿಕ ಸುಧಾಮೂರ್ತಿ ಅವರು ಮಾತನಾಡಿದರು.

ನಮ್ಮನ್ನು ನೋಡಿ. ನಾವು ವಯಸ್ಸಾದವರು. ಆದರೂ ಬೆಳಗ್ಗೆ 6 ಗಂಟೆಗೆ ಮತಚಲಾಯಿಸಲೆಂದು ಇಲ್ಲಿಗೆ ಬಂದಿದ್ದೇವೆ. ನಮ್ಮಿಂದ ನೀವು ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗವಾಗಿದೆ. ಹೀಗಾಗಿ ಯುವಕರು ಮತದಾನ ಮಾಡಬೇಕು ಎಂದು ಸುಧಾಮೂರ್ತಿ ಅವರು ಕರೆ ನೀಡಿದರು.

ಮೇ 13ಕ್ಕೆ ಫಲಿತಾಂಶ

ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net