More

    ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಕರೆ ಕೊಟ್ಟ ಪ್ರಧಾನಿ ಮೋದಿ

    ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ರಾಜ್ಯದ ಯುವ ಜನತೆಗೆ ಟ್ವೀಟ್​ ಮೂಲಕ ಕರೆಯೊಂದನ್ನು ನೀಡಿದ್ದಾರೆ.

    ಕರ್ನಾಟಕದ ಜನತೆ, ವಿಶೇಷವಾಗಿ ಯುವಜನರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸು ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಶ್ರೀಮಂತಗೊಳಿಸುವಂತೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಹುರಿದುಂಬಿಸಿದ್ದಾರೆ.

    ಚುನಾವಣೆಗೂ ಮುನ್ನ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ರಾಜ್ಯದ ಬಹುತೇಕ ಕತೆ ಬಿಜೆಪಿ ಪರ ಪತಯಾಚನೆ ಮಾಡಿದರು. ಸಾಕಷ್ಟು ಸಮಾವೇಶ ಮತ್ತು ರೋಡ್​ ಶೋಗಳ ಮೂಲಕ ಕೆಲವೇ ದಿವಸಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.

    ಇದನ್ನೂ ಓದಿ: ಎಲ್ಲರೂ ಬಂದು ಮತದಾನ ಮಾಡಿ: ತಮ್ಮ ಹಕ್ಕು ಚಲಾಯಿಸಿ ಮನವಿ ಮಾಡಿದ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    LIVE| ಕರ್ನಾಟಕ ಚುನಾವಣೆ 2023: ರಾಜ್ಯಾದ್ಯಂತ ಮತದಾನ ಆರಂಭ, ಇಲ್ಲಿದೆ ನೇರಪ್ರಸಾರ

    ಬೇಡ ನಿರ್ಲಕ್ಷ್ಯ.. ಭವಿಷ್ಯವನ್ನೇ ಬದಲಿಸಬಹುದು ಒಂದು ಮತ!

    ಎಲ್ಲರೂ ಬಂದು ಮತದಾನ ಮಾಡಿ: ತಮ್ಮ ಹಕ್ಕು ಚಲಾಯಿಸಿ ಮನವಿ ಮಾಡಿದ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts