More

    17ನೇ ವಯಸ್ಸಿಗೆ ಎರಡು ಮಕ್ಕಳ ತಾಯಿ, ಹದಿನೆಂಟನೆ ವಯಸ್ಸಿಗೆ ವಿಚ್ಛೇದನ…ಇದು ಖ್ಯಾತ ಕಿರುತೆರೆ ನಟಿಯ ರಿಯಲ್ ಸ್ಟೋರಿ!

    ಮುಂಬೈ: ಚಿತ್ರರಂಗದಲ್ಲಿ ಅಥವಾ ಕಿರುತೆರೆ ಲೋಕದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ತಮ್ಮದೇ ಆದ ಹಿನ್ನೆಲೆ ಹೊಂದಿರುತ್ತಾರೆ. ಕೆಲವರು ಆರ್ಥಿಕವಾಗಿ ಕಷ್ಟಪಟ್ಟು ಮುಂದಕ್ಕೆ ಬಂದರೆ, ಮತ್ತೆ ಕೆಲವರ ವೈಯಕ್ತಿಕ ಜೀವನವು ಆರಂಭದಿಂದಲೂ ಒಂದಲ್ಲಾ ಒಂದು ತೊಂದರೆಯಿಂದ ಕೂಡಿರುತ್ತದೆ. ಕೆಲವು ಸಮಯದ ಹಿಂದೆ ಕಿರುತೆರೆ ನಟಿ ಊರ್ವಶಿ ಧೋಲಾಕಿಯಾ ಕೂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಚಿಕ್ಕವಯಸ್ಸಿನಲ್ಲಿ ಇಂಡಸ್ಟ್ರಿಯಲ್ಲಿ ಹೇಗೆ ಬದುಕಬೇಕಿತ್ತು ಎಂಬುದನ್ನು ಅವರು ತಿಳಿಸಿದ್ದರು.

    ನಟಿ ಊರ್ವಶಿ ಧೋಲಾಕಿಯಾ ಅವರು ಚಿಕ್ಕವಯಸ್ಸಿನಲ್ಲಿ ಮದುವೆಯಾದರು. “ತಾಯಿಯಾದ ನಂತರ ನನಗೆ ಎರಡು ಮಕ್ಕಳ ಜವಾಬ್ದಾರಿ ಇತ್ತು. ಕೆಲಸ ಮಾಡುವುದು ಅನಿವಾರ್ಯವಾಯಿತು, ಆದರೆ ಜನರು ಗುರುತಿಸಲು ಪ್ರಾರಂಭಿಸಿದಾಗ ಮತ್ತು ಮಕ್ಕಳು ಬೆಳೆದಂತೆ ಎಲ್ಲವೂ ಸರಿಯಾಯಿತು” ಎಂದು ತಿಳಿಸಿದ್ದರು.

    View this post on Instagram

    A post shared by URVASHI (@urvashidholakia)

    ವಿಚ್ಛೇದನದ ನಂತರ ಶುರುವಾಯ್ತು ಊರ್ವಶಿ ಹೋರಾಟ
    ಸಿದ್ಧಾರ್ಥ್ ಕಾನನ್ ಅವರ ಟಾಕ್ ಶೋನಲ್ಲಿ, ಊರ್ವಶಿ ತಮ್ಮ ಜೀವನದ ಕೆಲವು ಕೇಳದ ಕಥೆಗಳನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು. ಅದನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಅಂದಹಾಗೆ ಈ ಶೋನಲ್ಲಿ ಸಿದ್ಧಾರ್ಥ್ ಕಾನನ್ ಊರ್ವಶಿಯವರಿಗೆ ಕೇಳಿದ ಪ್ರಶ್ನೆಗಳು ಹೀಗಿವೆ…

    ನೀವು ಯಾವ ವಯಸ್ಸಿನಲ್ಲಿ ಮದುವೆಯಾದ್ರಿ?
    16 ವರ್ಷ

    ನೀವು ಯಾರನ್ನಾದರೂ ಪ್ರೀತಿಸಿದ್ರಾ ಅಥವಾ ಇದು ನಿಮ್ಮ ಮನೆಯವರು ಮಾಡಿಸಿದ ಮದುವೆಯೇ?’
    ಇಲ್ಲ, ಇದು ಅರೆಂಜ್​​​ ಮದುವೆಯಲ್ಲ, ಪ್ರೇಮ ವಿವಾಹ.

    ಊರ್ವಶಿಗೆ 17ನೇ ವಯಸ್ಸಿಗೆ ಮಕ್ಕಳಾದವು. ಇದನ್ನು ಕೇಳಿದ ಸಿದ್ಧಾರ್ಥ್ 17ರ ಹರೆಯದಲ್ಲಿ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳುವುದೇ ದೊಡ್ಡ ವಿಚಾರ ಎಂದು ಅಚ್ಚರಿ ವ್ಯಕ್ತಪಡಿಸಿದರು. ಹಾಗೆಯೇ ಊರ್ವಶಿ 17ನೇ ವಯಸ್ಸಿನಲ್ಲಿ ಎರಡು ಮಕ್ಕಳ ತಾಯಿಯಾದ ನಾನು 18ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದೆ ಎಂದು ಹೇಳಿದರು.

    ಇನ್ನು ಊರ್ವಶಿ, ‘ಆ ಸಮಯದಲ್ಲಿ ತುಂಬಾ ಕಷ್ಟವಾಗಿತ್ತು, ನನ್ನ ತಂದೆ ತಾಯಿ ನನಗೆ ತುಂಬಾ ಸಪೋರ್ಟ್ ಮಾಡಿದರು. ಆದರೆ ಮಕ್ಕಳನ್ನು ಬೆಳೆಸಲು ನಾನು ಕೆಲಸ ಮಾಡಬೇಕಾಗಿತ್ತು. ಆದುದರಿಂದ ಪ್ರಾರಂಭದಲ್ಲಿ ನನ್ನ ಕೈಗೆ ಸಿಗುವ ಕೆಲಸವನ್ನೆಲ್ಲ ಮಾಡುತ್ತಿದ್ದೆ. ಆ ದಿನಗಳನ್ನು ನೆನಪಿಸಿಕೊಂಡ ಊರ್ವಶಿ, ಯಾರಾದರೂ ಹೊಸಬರು ಇಂಡಸ್ಟ್ರಿಗೆ ಬಂದರೆ ಸಮಸ್ಯೆ ಇದ್ದೇ ಇರುತ್ತದೆ, ಬಲವಂತದಿಂದ ಕೆಲಸ ಮಾಡುತ್ತಲಿದ್ದೆ. ನನಗೆ ಬಂದ ಪಾತ್ರಗಳನ್ನು ಒಪ್ಪಿಕೊಂಡೆ. ಹುಡುಗಿಯಾಗಿದ್ದ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು’ ಎಂದರು.

    ಆ ನಂತರ ಊರ್ವಶಿ ಹಿಂತಿರುಗಿ ನೋಡಲೇ ಇಲ್ಲ. ಕಭಿ ಸೌತಾನ್ ಕಭಿ ಸಾಹೇಲಿ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಕಸೌತಿ ಜಿಂದಗಿ ಕೇ ಧಾರವಾಹಿಯಲ್ಲಿ ಕೊಮೊಲಿಕಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಇದಲ್ಲದೆ, ಅವರು ‘ಚಂದ್ರಕಾಂತ’, ‘ನಾಗಿನ್ 6’, ದೇಖ್ ಭಾಯಿ ದೇಖ್ ಮತ್ತು ಮೆಹಂದಿ ತೇರೆ ನಾಮ್ ಕಿ ನಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ಹೋಪ್ ಗಾಲಾ ಈವೆಂಟ್​​​​​ನಲ್ಲಿ ಎಲ್ಲರ ಗಮನ ಸೆಳೆದ ಆಲಿಯಾ ಧರಿಸಿದ ಸೀರೆ, ನೆಕ್ಲೇಸ್…ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts