ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​-2 ಕಾರ್ಯಾಚರಣೆ ಮೇ 1ರಿಂದ 18 ತಿಂಗಳು ಸ್ಥಗಿತ

AIRPORT NEWS
Published on

ಸಿಂಗಾಪುರ: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿರುವ ಪರಿಣಾಮ ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​-2 ಕಾರ್ಯಾಚರಣೆಯನ್ನು ಮೇ.1ರಿಂದ ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮೇ.1ರಿಂದ 18 ತಿಂಗಳ ಕಾಲ ಟರ್ಮಿನಲ್​-2 ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ಸಿಂಗಾಪುರದ ಸಾರಿಗೆ ಸಚಿವ ಖಾವ್​ಬೂನ್​ ವಾನ್​ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ನಿಭಾಯಿಸಲು ಸದ್ಯ ಒಂದು ಟರ್ಮಿನಲ್​ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕರೊನಾ ವೈರಸ್​ ನಿಯಂತ್ರಣಕ್ಕೆ ಬಂದರೂ ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳಲು ವರ್ಷ ಬೇಕು. ಹೀಗಾಗಿ 18 ತಿಂಗಳ ಕಾಲ ಟರ್ಮಿನಲ್​ ಬಳಕೆಯನ್ನು ಸ್ಥಗಿತಗೊಳಿಸಲಾಗುವುದು.

ಟರ್ಮಿನಲ್​-2 ಸ್ಥಗಿತಗೊಳಿಸಿದ ನಂತರ ಉಳಿದ ಟರ್ಮಿನಲ್​ಗಳಿಗೆ ವಿಮಾನ ಹಾರಾಟವನ್ನು ಹಂಚಿಕೆ ಮಾಡಲಾಗುವುದು. ಸದ್ಯಕ್ಕೆ ಟರ್ಮಿನಲ್​-3 ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net