More

    ಹೊಟ್ಟೆ ಉಬ್ಬರಕ್ಕೆ ಕಾರಣ ಹಾಗೂ ಈ ಸಮಸ್ಯೆಗೆ ಸುಲಭ ಆಯುರ್ವೇದ ಮನೆಮದ್ದುಗಳಿವು

    ಬೆಂಗಳೂರು: ಹೊಟ್ಟೆ ಉಬ್ಬರವು ಸಾಮಾನ್ಯವಾಗಿ ಹೊಟ್ಟೆಯಲ್ಲಿನ ಅನಿಲ, ಆಹಾರ, ಪಾನೀಯಗಳು, ಅಜೀರ್ಣ ಸಮಸ್ಯೆಯಿಂದಾಗಿ ಉಂಟಾಗುತ್ತದೆ. ನಿಮಗೆ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಈ ಮನೆ ಮದ್ದುಗಳನ್ನು ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದು.

    ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡುವುದು. ಕುದಿಯುವ ನೀರಿಗೆ ಜೀರಿಗೆ ಅಥವಾ ಶುಂಠಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಮಧ್ಯಾಹ್ನ ಊಟ ಮುಗಿದ ಒಂದು ಲೋಟ ಮಜ್ಜಿಗೆ ಸೇವಿಸುವುದು ಉತ್ತಮ.
    ಪುದೀನಾ ನೈಸರ್ಗಿಕ ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದ್ದು,ಇದು ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡಿ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ತಜ್ಞರು: ಹೊಸ ಮಾಲ್‌ವೇರ್‌ ಸಂಶೋಧಕರಿಂದ ಬಹಿರಂಗ

    ಆ್ಯಪಲ್ ಸೈಡರ್ ವಿನೆಗರ್ ಹೊಟ್ಟೆಯ ಆಮ್ಲೀಯತೆಯನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಆಪಲ್ ಸೈಡರ್ ವಿನೆಗರ್​ನ್ನು ನೀರಿನೊಂದಿಗೆ ಬೆರೆಸಿ ಮತ್ತು ಊಟಕ್ಕೆ ಮೊದಲು ಕುಡಿಯಬಹುದಾಗಿದೆ.

    ನಿಂಬೆ ಪಾನಕ ಅಥವಾ ನಿಂಬೆ ರಸ ಮಿಶ್ರಿತ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವುದರ ಜತೆಗೆ ಉಬ್ಬುವಿಕೆಯನ್ನು ನಿಯಂತ್ರಿಸುತ್ತದೆ. ಬಾಳೆಹಣ್ಣುಗಳು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದ್ದು, ದೇಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸಲು ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಪಪ್ಪಾಯಿಯು ಪಪೈನ್ ಎಂಬ ಕಿಣ್ವವನ್ನು ಹೊಂದಿರುತ್ತವೆ. ಇದು ಆಹಾರದಲ್ಲಿನ ಪ್ರೋಟೀನ್​ನ್ನು ಒಡೆಯಲು ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಎಲ್ಲಾ ಪರಿಹಾರಗಳು ಎಲ್ಲರಿಗೂ ಯಶಸ್ಸನ್ನು ನೀಡುವುದಿಲ್ಲ ಮತ್ತು ಕೆಲವು ಅನಗತ್ಯ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉಬ್ಬಿದ ಹೊಟ್ಟೆ ಮತ್ತು ಅನಿಲಕ್ಕೆ ಮನೆಮದ್ದುಗಳನ್ನು ಬಳಸುವಾಗ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಿ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts