More

    ವೀರ ಸಾವರ್ಕರ್ ಹೆಸರಿನ ಕಾರ್ಯಕ್ರಮಕ್ಕೆ ಸರ್ಕಾರದಿಂದ ತಡೆ?; ಕೊನೆಗೂ…

    ಮೈಸೂರು: ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಹೆಸರಿನ ಕಾರ್ಯಕ್ರಮಕ್ಕೆ ಸರ್ಕಾರ ತಡೆವೊಡ್ಡಲು ಯತ್ನಿಸಿದೆ ಎನ್ನಲಾದ ಆರೋಪವೊಂದು ಕೇಳಿಬಂದಿದ್ದು, ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

    ಸಾವರ್ಕರ್ ಪ್ರತಿಷ್ಠಾನವು ವೀರ ಸಾವರ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ಚಿತ್ರಕತೆ, ರಕ್ತದಾನ ಶಿಬಿರ ಹಾಗೂ ಛದ್ಮವೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಯಾವುದೇ ಕಾರಣ ನೀಡದೆ ಮುಕ್ತ ವಿವಿ ಕುಲಪತಿ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಿದ್ದರು. ಅಲ್ಲದೆ ಗೇಟ್‌ಗೆ ಬೀಗ ಜಡಿದು ಒಳಗೆ ಯಾರೂ ಹೋಗದಂತೆ ತಡೆಯೊಡ್ಡಿದ್ದರು.

    ಅನುಮತಿ ರದ್ದುಗೊಳಿಸಿದ್ದರಿಂದ ಗೇಟ್ ಮುಂಭಾಗದಲ್ಲಿ ಮಕ್ಕಳು ಚಿತ್ರಬಿಡಿಸಲಾರಂಭಿಸಿದ್ದು, ಭದ್ರತೆಗಾಗಿ ಬಳಿಕ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆಗೊಂಡಿತ್ತು. ಹೀಗೆ ಸಾವರ್ಕರ್ ಹೆಸರಿನ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದರೆನ್ನಲಾದ ವಿಚಾರ ವ್ಯಾಪಿಸಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ವಿವಿ ಅಧಿಕಾರಿಗಳು ಎಚ್ಚೆತ್ತು, ಗೇಟ್ ತೆರೆದು ವಿವಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟರು.

    ಇದನ್ನೂ ಓದಿ: ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಸಾವು!

    ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಆಗಮಿಸಿದ್ದು, ಸಾವರ್ಕರ್ ಬಗ್ಗೆ ಅಭಿಮಾನಿಗಳು ಜೈಕಾರ ಕೂಗಿದರು. ಸದ್ಯ ಮಕ್ಕಳು-ಹಿರಿಯರು ಚಿತ್ರಕಲೆಯಲ್ಲಿ ನಿರತರಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮುಂತಾದವರು ಭಾಗವಹಿಸಿರುವ ಈ ಸಮಾರಂಭದಲ್ಲಿ ಸಾಹಿತಿ ವಿಕ್ರಂ ಸಂಪತ್‌ ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ.

    ಇಂದಿನ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರ ಸಾವರ್ಕರ್ ಕಾರ್ಯಕ್ರಮ ತಡೆಯಲು ಯತ್ನ ಮಾಡಿದೆ. ಸಾವರ್ಕರ್ ಅವರನ್ನು ಸೋನಿಯಾ ನೇತೃತ್ವದ ಕಾಂಗ್ರೆಸ್ ಸದಾ ವಿರೋಧಿಸುತ್ತದೆ, ಪೊಲೀಸರನ್ನು ಹಾಕಿ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ಆದರೆ ಕಾಂಗ್ರೆಸ್​ನ ಟೊಳ್ಳು ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದರು.

    ಪೊಲೀಸರು ಸಾರ್ವಜನಿಕರ ಜತೆ ಕಡೇಪಕ್ಷ ಸಭ್ಯತೆಯಿಂದ ವರ್ತಿಸಿ: ಪೊಲೀಸರಿಗೆ ಎಡಿಜಿಪಿ ಪರೋಕ್ಷ ಎಚ್ಚರಿಕೆ

    ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts