More

    ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ತಜ್ಞರು: ಹೊಸ ಮಾಲ್‌ವೇರ್‌ ಸಂಶೋಧಕರಿಂದ ಬಹಿರಂಗ

    ದೆಹಲಿ: ಜಾಗತಿಕ ಇಂಟರನೆಟ್ ಬಳಕೆದಾರರನ್ನು ಕಾಡುವ ಸಮಸ್ಯೆಗಳಲ್ಲಿ ಮಾಲ್​ವೇರ್ ಕೂಡ ಒಂದಾಗಿದ್ದು, ವ್ಯಕ್ತಿಗತ ಅಥವಾ ಸಂಘ ಸಂಸ್ಥೆಗಳ ಮಾಹಿತಿಯನ್ನು ಕದಿಯುವ ಸಲುವಾಗಿ ವೈರಸ್​​ಗಳನ್ನು ಉಪಯೋಗಿಸುತ್ತಾರೆ. ಸೈಬರ್ ಅಪರಾಧಿಗಳು ಯಾವಾಗಲೂ ಇಂತಹ ಕೃತ್ಯಗಳಲ್ಲಿ ಮುಳುಗಿದ್ದು, ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

    ಈ ಹೊಸದಾಗಿ ಪತ್ತೆಯಾದ ವೈರಸ್​​ ಓಪನ್ ಸೋರ್ಸ್ ಆಂಡ್ರಾಯ್ಡ್ ಮಾಲ್‌ವೇರ್ ಆಗಿದ್ದು ಬ್ಯಾಂಕಿಂಗ್, ಹಣಕಾಸು ಸೇವೆಗಳು,ವಿಮೆ, ಇ-ಕಾಮರ್ಸ್ ಮತ್ತು ಮನರಂಜನಾ ಕ್ಷೇತ್ರಗಳ ಮೇಲೆ ನಿರ್ದಿಷ್ಟ ಗಮನವನ್ನು ಹೊಂದಿರುವ ವಿವಿಧ ಉದ್ಯಮಗಳನ್ನು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಇದನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

    ಇದನ್ನೂ ಓದಿ: ಕೇಂದ್ರ ಸರ್ಕಾರ ಅಕ್ಕಿ ಬದಲು ಜನರ ಖಾತೆಗಳಿಗೆ ಹಣ ಹಾಕುವುದು ಸೂಕ್ತ: ಅರವಿಂದ್​ ಬೆಲ್ಲದ್​

    DogeRAT(ರಿಮೋಟ್ ಆಕ್ಸೆಸ್ ಟ್ರೋಜನ್) ಎಂದು ಕರೆಯುವ ಈ ಹೊಸ ಆಂಡ್ರಾಯ್ಡ್‌ ವೈರಸ್‌, ನಕಲಿ ಆ್ಯಪ್‌ಗಳ ಮೂಲಕ ಹರಡುತ್ತಿದೆ. ಸೈಬರ್ ಹ್ಯಾಕರ್‌ಗಳು DogeRATನ್ನು ನಕಲಿ ಯೂಟ್ಯೂಬ್, ನೆಟ್‌ಫ್ಲಿಕ್ಸ್, ಇನ್‌ಸ್ಟಾಗ್ರಾಮ್, ಒಪೇರಾಮಿನಿ ಮತ್ತು ಇತರ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಹರಿಬಿಡುತ್ತಿದ್ದಾರೆ.

    ಒಮ್ಮೆ ಇದು ಮೊಬೈಲ್ ಪ್ರವೇಶಿಸಿದ ನಂತರ ಸಂಪರ್ಕಗಳು, ಸಂದೇಶಗಳು ಮತ್ತು ಬ್ಯಾಂಕಿಂಗ್ ಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು. ಜತೆಗೆ ಹ್ಯಾಕರ್‌ಗಳಿಗೆ ರಿಮೋಟ್ ಪ್ರವೇಶವನ್ನು ನೀಡಿ ಅನಧಿಕೃತ ಪಾವತಿ ಮಾಡುವುದು, ಫೈಲ್‌ಗಳನ್ನು ಕಳುಹಿಸುವುದು, ಕರೆ ದಾಖಲೆಗಳನ್ನು ವೀಕ್ಷಿಸುವುದು, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳ ಮೂಲಕ ಫೋಟೋ ತೆಗೆಯುವಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.

    DogeRATನಿಂದ ನಿಮ್ಮ ಡಿವೈಸ್‌ನ ರಕ್ಷಣೆ ಹೇಗೆ?
    ನಕಲಿ ಆ್ಯಪ್​ಗಳನ್ನು ಬಳಸಬೇಡಿ. ಅಧಿಕೃತ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಿ. ಬೇರೆಯವರು ಕಳುಹಿಸಿದ ಅನುಮಾನಾಸ್ಪದ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಡಿ. ಆಪರೇಟಿಂಗ್ ಸಿಸ್ಟಂ ಮತ್ತು ಅಪ್ಲಿಕೇಶನ್‌ಗಳನ್ನು ಆಗಾಗ ಅಪ್ ಡೇಟ್ ಮಾಡಿ, ಏಕೆಂದರೆ ಇದು ಸಾಮಾನ್ಯವಾಗಿ ಮಾಲ್‌ವೇರ್‌ನಿಂದ ನಿಮ್ಮ ಸಾಧನವನ್ನು ರಕ್ಷಿಸಲು ಸಹಾಯ ಮಾಡುವ ಭದ್ರತಾ ಪ್ಯಾಚ್‌ಗಳನ್ನು ಒಳಗೊಂಡಿರುತ್ತದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts