More

    ಕೇಂದ್ರ ಸರ್ಕಾರ ಅಕ್ಕಿ ಬದಲು ಜನರ ಖಾತೆಗಳಿಗೆ ಹಣ ಹಾಕುವುದು ಸೂಕ್ತ: ಅರವಿಂದ್​ ಬೆಲ್ಲದ್​

    ಹುಬ್ಬಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಐದು ಕೆಜಿ ಅಕ್ಕಿಯಲ್ಲಿಯೇ ಕಾಂಗ್ರೆಸ್​ ರಾಜಕೀಯ ಮಾಡುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್​ ಟೀಕಿಸಿದ್ದಾರೆ.

    ಕಾಂಗ್ರೆಸ್​ ಪಕ್ಷವು ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಶುಕ್ರವಾರ ನಡೆದ ಸಂಪುಟ ಸಭೆ ಬಳಿಕ ಜಾರಿಗೆ ತಂದ ಕುರಿತು ಅರವಿಂದ್​ ಬೆಲ್ಲದ್​ ಪ್ರತಿಕ್ರಿಯಿಸಿದ್ದಾರೆ.

    ಅಕ್ಕಿ ಬದಲು ಹಣ ಕೊಡಿ

    ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಐದು ಕೆಜಿ ಅಕ್ಕಿಯಲ್ಲಿಯೇ ಕಾಂಗ್ರೆಸ್​ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಕ್ಕಿ ಕೊಡುವ ಬದಲು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಅದರ ಹಣವನ್ನು ವರ್ಗಾವಣೆ ಮಾಡಬೇಕು. ಹಾಗೆ ಮಾಡಿದ್ದಲ್ಲಿ ಯಾರು ಎಷ್ಟು ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂದು ಜನರಿಗೆ ತಿಳಿಯುತ್ತದೆ.

    ಕೇಂದ್ರ ಸರ್ಕಾರ ಅಕ್ಕಿ ಬದಲು ಜನರ ಖಾತೆಗಳಿಗೆ ಹಣ ಹಾಕುವುದು ಸೂಕ್ತ: ಅರವಿಂದ್​ ಬೆಲ್ಲದ್​

    ಜನರು ಬರಿ ಅಕ್ಕಿ ತಿನ್ನುವುದಿಲ್ಲ. ಒಬ್ಬರಿಗೆ ತಿಂಗಳಿಗೆ 10 ಕೆಜಿ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ನೀಡುವ ಅಕ್ಕಿಯ ಬದಲು ಅದರ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಿದರೆ ಅವರು ದೈನಿಂದನ ಆಹಾರ ಪದಾರ್ಥಗಳಾದ ರಾಗಿ, ಜೋಳದಂತಹ ಧಾನ್ಯಗಳನ್ನು ಖರೀದಿಸುತ್ತಾರೆ.

    ಇದನ್ನೂ ಓದಿ: ಶಾಪಗ್ರಸ್ತ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು? ಕಳೆದ ನಾಲ್ಕು ದಶಕದಲ್ಲಿ 8 ಅಪಘಾತ

    ಕೇಂದ್ರ ಸರ್ಕಾರ ಅಕ್ಕಿ ಕೊಡುವ ಬದಲು ಖಾತೆಗಳಿಗೆ ಹಣ ಹಾಕಿದರೆ ಜನರಿಗೆ ಕಾಂಗ್ರೆಸ್​ನ ಗ್ಯಾರಂಟಿಗಳ ಬಗ್ಗೆ ಅರಿವಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ ಎಂದು​ ಹೇಳಿದ್ದಾರೆ.

    ಜವಾಬ್ದಾರಿ ನಿಭಾಯಿಸಲು ಸಿದ್ದ

    ವಿರೋಧ ಪಕ್ಷದ ನಾಯಕರ ಆಯ್ಕೆ ಕುರಿತು ಪ್ರತಿಕ್ರಿಯಿಸಿ ಈ ಬಗ್ಗೆ ಪಕ್ಷದ ಹೈಕಮಾಂಡ್​ ತೀರ್ಮಾನ ಮಾಡುತ್ತದೆ. ಅವರು ಏನೇ ಜವಾಬ್ದಾರಿ ನೀಡಿದರೂ ನಾನು ನಿಭಾಯಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

    ವಿರೋಧ ಪಕ್ಷದ ನಾಯಕರ ಆಯ್ಕೆ ಪಕ್ಷದ ನಾಯಕರಿಗೆ ಬಿಟ್ಟಿದ್ದು ನನಗೆ ಶಾಸಕನಾಗಿ ಕೆಲಸ ಮಾಡುವಂತೆ ಟಿಕೆಟ್​ ಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದ ಜನತೆ ಕೂಡ ಆಶೀರ್ವಾದ ಮಾಡಿದ್ದಾರೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts