ಅಮೆರಿಕದಲ್ಲಿ ‘ಸಿಂಬಾ’, ‘ಗೋಲ್​ಮಾಲ್​ ಅಗೇನ್​’ ಮರುಬಿಡುಗಡೆ

Aimba
Published on

ಈಗಾಗಲೇ ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು ಮುಚ್ಚಲ್ಪಟ್ಟಿವೆ. ಕಲೆದ ಆರು ತಿಂಗಳಿಂದ ಸಿನಿಮಾ ಪ್ರದರ್ಶನವಾಗಿಲ್ಲ. ಕರೊನಾ ಹಾವಳಿ ಹತೋಟಿಗೆ ಬಂದ ನಂತರವೇ ಸಿನಿಮಾ ಪ್ರದರ್ಶನ ಸಾಧ್ಯ. ಹೀಗಿರುವಾಗಲೇ ಹೊರದೇಶಗಳಲ್ಲಿ ಕರೊನಾ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ.

ರಣವೀರ್ ಸಿಂಗ್​ ನಾಯಕತ್ವದ ಸಿಂಬಾ ಮತ್ತು ಅಜಯ್​ ದೇವಗನ್​ ನಟನೆಯ ಗೊಲ್​ಮಾಲ್​ ಅಗೇನ್​ ಸಿನಿಮಾಗಳು ಮರುಬಿಡುಗಡೆಗೆ ಪ್ಲಾನ್​ ಮಾಡಿಕೊಂಡಿವೆ. ಹಾಗಂತ ಭಾರತದಲ್ಲಿ ಅಲ್ಲ, ದೂರದ ಅಮೆರಿಕದಲ್ಲಿ ಈ ಸಿನಿಮಾಗಳು ರೀ ರಿಲೀಸ್​ ಆಗಲಿವೆ.

ಈ ವಿಚಾರವನ್ನು ರಿಲಯನ್ಸ್ ಎಂಟರ್​ಟೈನ್​ಮೆಂಟ್​ ಅಧಿಕೃತವಾಗಿ ಟ್ವಿಟರ್​ನಲ್ಲಿ ಘೋಷಣೆ ಮಾಡಿಕೊಂಡಿದ್ದು, ಆಗಸ್ಟ್ 28ರಿಂದ ಸಿಂಬಾ ಪ್ರದರ್ಶನ ಶುರುವಾಗಿದೆಯಂತೆ. ವರ್ಜಿನಿಯಾದ ರಿಗಲ್ ವರ್ಜಿನಿಯಾ ಸೆಂಟರ್​ನಲ್ಲಿ ಪ್ರದರ್ಶನ ಕಾಣುತ್ತಿದೆ.

2018ರ ಡಿಸೆಂಬರ್​ನಲ್ಲಿ ತೆರೆಕಂಡಿದ್ದ ಸಿಂಬಾ ಸೂಪರ್​ ಹಿಟ್ ಪಟ್ಟಿ ಸೇರುವುದರ ಜತೆಗೆ ಬಾಕ್ಸ್ಆಫೀಸ್​ನಲ್ಲಿ ಒಳ್ಳೇ ಕಮಾಯಿ ಮಾಡಿತ್ತು. ಅದೇ ರೀತಿ ಗೋಲ್​ಮಾಲ್​ ಅಗೇನ್​ ಸಹ ಶತಕೋಟಿ ಕ್ಲಬ್​ಗೆ ಸೇರ್ಪಡೆಯಾಗಿತ್ತು. ಇನ್ನೊಂದು ವಿಶೇಷ ಏನೆಂದರೆ ಈ ಎರಡು ಸಿನಿಮಾ ನಿರ್ದೇಶನ ಮಾಡಿದ್ದು ರೋಹಿತ್​ ಶೆಟ್ಟಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net