

ಕಳೆದ ವರ್ಷ ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿ ಬಿಜಿಯಾಗಿದ್ದ ಹರಿಪ್ರಿಯಾ, ಒಂದಷ್ಟು ದಿನ ರೆಸ್ಟ್ ಸಿಕ್ಕರೆ ಸಾಕಪ್ಪಾ ಎನ್ನುತ್ತಿದ್ದರು. ಅಷ್ಟೊತ್ತಿಗಾಗಲೇ ಕರೊನಾ ಲಾಕ್ಡೌನ್ ಶುರುವಾಗಿ, ಸುದೀರ್ಘ 6 ತಿಂಗಳು ಮನೆಯಲ್ಲಿ ಕಳೆದರು. ಇದೀಗ ಮತ್ತೆ ಸೆಟ್ಗೆ ಆಗಮಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಸಿನಿಮಾ ಮಂದಿ ಶೂಟಿಂಗ್ ಬದಿಗಿಟ್ಟು ಮನೆಯಲ್ಲಿಯೇ ಕಾಲ ಕಳೆದರು. ಇತ್ತೀಚೆಗೆ ಒಂದಷ್ಟು ಸಡಿಲಿಕೆ ನೀಡಿ ಶೂಟಿಂಗ್ ಆರಂಭಿಸುವಂತೆ ಸರ್ಕಾರ ಆದೇಶವನ್ನೂ ಹೊರಡಿಸಿತು. ಅದರ ಅನ್ವಯ ಈಗಾಗಲೇ ಕೆಲ ಸಿನಿಮಾ ತಂಡಗಳು ಶೂಟಿಂಗ್ನಲ್ಲಿ ತೊಡಗಿಸಿಕೊಂಡಿವೆ.
‘ಮತ್ತೆ ಕೆಲಸದತ್ತ.. ಶೂಟಿಂಗ್ ಸೆಟ್, ಮೇಕಪ್, ವ್ಯಾನಿಟಿ ವ್ಯಾನ್, ಸ್ಕ್ರಿಪ್ಟ್, ಸಿಬ್ಬಂದಿ, ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಮರಾ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೆ. ಕಳೆದ ವರ್ಷ ಅತಿ ಹೆಚ್ಚು ಸಿನಿಮಾಗಳಲ್ಲಿ ಪಾಲ್ಗೊಂಡಿದ್ದೆ. ಈ ವರ್ಷ ಕರೊನಾ ಲಾಕ್ಡೌನ್ಗೆ ಧನ್ಯವಾದ ಹೇಳಬೇಕು. ಆರು ತಿಂಗಳು ರೆಸ್ಟ್ ನೀಡಿದೆ. ಇದೀಗ ಮತ್ತೆ ಸೆಟ್ಗೆ ಆಗಮಿಸಿರುವುದು ಮಜವೆನಿಸಿದೆ. ಆದರೆ, ನಾನು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿಲ್ಲ. ನಿಮಗೆನಾದರೂ ಗೊತ್ತಿದ್ದರೆ, ಊಹೆ ಮಾಡಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ ಹರಿಪ್ರಿಯಾ.