ಸಿಲ್ಕ್ ಲುಕ್‌ನಲ್ಲಿ ಚಂದ್ರಿಕಾ; ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಲುಕ್ ಬಿಡುಗಡೆ

silk-smotha
Published on

‘ಸಿಲ್ಕ್ ಸ್ಮಿತಾ’ ಎಂದೇ ಖ್ಯಾತಿಯಾಗಿರುವ ವಿಜಯಲಕ್ಷ್ಮಿ ವಡ್ಲಪಾಟಿ ಸುಮಾರು 18 ವರ್ಷಗಳ ಸಿನಿ ಜೀವನದಲ್ಲಿ 450ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದವರು. ಕನ್ನಡದ ‘ಹಳ್ಳಿ ಮೇಷ್ಟ್ರು’, ‘ಪ್ರಚಂಡ ಕುಳ್ಳ’ ಸೇರಿ ತಮಿಳು, ಮಲಯಾಳಂ, ತೆಲುಗು ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದರು. ಜತೆಗೆ ಸಾಕಷ್ಟು ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾದವರು.

ಈಗಾಗಲೇ ಸಿಲ್ಕ್ ಸ್ಮಿತಾ ಜೀವನದ ಬಗ್ಗೆ ‘ದಿ ಡರ್ಟಿ ಪಿಕ್ಚರ್’ ಎಂಬ ಸಿನಿಮಾ ಬಂದಿದ್ದು, ಸ್ಮಿತಾ ಪಾತ್ರವನ್ನು ವಿದ್ಯಾ ಬಾಲನ್ ಮಾಡಿದ್ದರು. ಈಗ ಸಿಲ್ಕ್ ಸ್ಮಿತಾ ಜೀವನದ ಬಗ್ಗೆ ಮತ್ತೊಂದು ಸಿನಿಮಾ ಸಿದ್ಧವಾಗಿದೆ. ಈ ಬಾರಿ ‘ಸ್ವೀಟ್ ಕಾರಂ ಕಾಫಿ’ ಸರಣಿ ಖ್ಯಾತಿಯ ಚಂದ್ರಿಕಾ ರವಿ ಮುಖ್ಯ ಪಾತ್ರ ಮಾಡಲಿದ್ದಾರೆ. ಈ ಚಿತ್ರಕ್ಕೆ ಜಯರಾಂ ಶಂಕರನ್ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಶನಿವಾರ (ಡಿ.2) ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಚಿತ್ರದ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಿಲ್ಕ್ ಸ್ಮಿತಾ ಲುಕ್‌ನಲ್ಲಿ ಕಾಣಿಸಿಕೊಂಡ ಚಂದ್ರಿಕಾ, ಸಾಮಾಜಿಕ ಜಾಲತಾಣದಲ್ಲಿ ೆಟೋ ಹಂಚಿಕೊಂಡು, ‘ಕಾಲಾತೀತ ಸುಂದರಿ ಸಿಲ್ಕ್ ಸ್ಮಿತಾಗೆ 63ನೇ ಹುಟ್ಟುಹಬ್ಬದ ಶುಭಾಶಯ. ಅವರ ಕುಟುಂಬದ ಆಶೀರ್ವಾದದೊಂದಿಗೆ ಸ್ಮಿತಾ ಬಗ್ಗೆ ಹೇಳದೇ ಉಳಿದ ಕಥೆಯನ್ನು ಹೇಳಲು ಬರುತ್ತಿದ್ದೇವೆ ಎಂಬ ಖುಷಿಯಿದೆ’ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಚಂದ್ರಿಕಾ ಇಂಗ್ಲಿಷ್‌ನ ‘ಬಾಲಿವುಡ್ ಟು ಹಾಲಿವುಡ್’ ಪ್ರಾಜೆಕ್ಟ್‌ನಲ್ಲೂ ಬಿಜಿಯಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net