More

    ರಾಧಾ ರಮಣ ಸೀರಿಯಲ್​ ಖ್ಯಾತಿಯ ಕಾವ್ಯಾ ಗೌಡ ಪ್ರೆಗ್ನೆಂಟ್​​; ಪತಿ ಸೋಮ್​ಶೇಖರ್​​ ಜತೆಗೆ ಬಂಪ್​​​ ಫೋಟೋಶೂಟ್​​​ ಮಾಡಿಸಿಕೊಂಡ ನಟಿ, ಫೋಟೋ ವೈರಲ್​..!

    ಕನ್ನಡ ಖ್ಯಾತ ಕಿರುತೆರೆ ನಟಿ ಕಾವ್ಯಾ ಗೌಡ ತಾಯಿಯಾಗುತ್ತಿರುವ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಜೊತೆ ಹಂಚಿಕೊಂಡಿದ್ದಾರೆ. ‘ಇದುವರೆಗೂ ನಾವು ಮುಚ್ಚಿಟ್ಟಿದ ಬೆಸ್ಟ್‌ ಸೀಕ್ರೆಟ್‌ ಇದು. ನಮ್ಮೆಲ್ಲಾ ಆಪ್ತರ ಜೊತೆ ಹಂಚಿಕೊಳ್ಳಲು ಇಚ್ಚಿಸುತ್ತೀನಿ….ನಮ್ಮ ಕಂದಮ್ಮ 2024ರಲ್ಲಿ ಆಗಮಿಸಲಿದ್ದಾರೆ’ ಎಂದು ಇನ್ಸ್​​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.


    ಜತೆಗೆ ನಾವು ಇದುವರೆಗೂ ಮುಚ್ಚಿಟ್ಟಂತಹ ಬೆಸ್ಟ್​​ ಸೀಕ್ರೇಟ್​ ಇದೇ ಎಂದು ಕಾವ್ಯಾ ಗೌಡ ಪೋಸ್ಟ್​​ ಜತೆಗೆ ಬರೆದಿದ್ದು, ವಿದೇಶದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ಕಳೆದ 2 ವರ್ಷಗಳಲ್ಲಿ ನಾವು ತುಂಬಾ ಹಂಚಿಕೊಂಡಿದ್ದೀವಿ. ದಿನದಿಂದ ದಿನಕ್ಕೆ ನಿಮ್ಮ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿರುವ ರೀತಿ ನೋಡುತ್ತಿರುವೆ. ತುಂಬಾ ಕೇರ್ ಮಾಡುತ್ತೀರಾ ಮತ್ತು ಮೆಚ್ಯೂರ್ ಆಗಿರುತ್ತೀರಿ’


    ನೀವು ನನ್ನ ಜೀವನದ ಪ್ರತಿಯೊಂದು ಸುಖ ದು:ಖದಲ್ಲಿ ಜತೆಯಾಗಿದ್ದೀರಿ. ನನ್ನ ಸಣ್ಣ ಪುಟ್ಟ ಇಷ್ಟಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡಿರುವುದು ನನಗೆ ಖುಷಿ ಕೊಡುತ್ತದೆ. ನನ್ನ ಹೃದಯ ನಿಮ್ಮನ್ನು ಅಂದುಕೊಂಡಿದ್ದಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಹಾಗಾಗಿ ಧನ್ಯವಾದ. ನನ್ನ ಜೀವನಕ್ಕೆ ಅರ್ಥ ಕೊಟ್ಟವರು ನೀವು. ಎಂದಿಗೂ ನನ್ನ ಜತೆಯಲ್ಲಿರಿ ಎಂದು ಬರೆದಿದ್ದಾರೆ.


    ನೀವು ಎಷ್ಟು ಮುಖ್ಯ ಎಂದು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನ್ನ ಸಣ್ಣ ಪುಟ್ಟ ಇಷ್ಟಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡಿರುವುದು ನನಗೆ ಖುಷಿ ಕೊಡುತ್ತದೆ ಎಂದು ಕಾವ್ಯಾ ತಮ್ಮ ಪತಿ ಸೋಮ್​​ಶೇಖರ್​ ಕುರಿತಾಗಿ ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts