ಹೊಸ ಸಿನಿಮಾದ ಸುಳಿವು ಕೊಟ್ರು ಯಶ್​!; ಈ ದಿನದಂದು ರಿವೀಲ್ ಆಗಲಿದೆ ಟೈಟಲ್

Untitled design (21)
Published on

ಬೆಂಗಳೂರು: ​ಪ್ಯಾನ್​ ಇಂಡಿಯಾ ಸ್ಟಾರ್​, 'ಕೆಜಿಎಫ್'​ ಖ್ಯಾತಿಯ ನಟ ರಾಕಿಂಗ್​ ಸ್ಟಾರ್​ ಯಶ್​ ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳಿಗೆ ಸುಳಿವು ನೀಡಿದ್ದು, ಹೊಸ ಚಿತ್ರದ ಟೈಟಲ್​ ಅನಾವರಣಗೊಳ್ಳುವ ದಿನಾಂಕ ಮತ್ತು ಸಮಯವನ್ನು ಪೋಸ್ಟರ್​ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.

'ಕೆಜಿಎಫ್ 2' ಯಶಸ್ಸಿನ ಬಳಿಕ ಕೊಂಚ ಬ್ರೇಕ್​ ತೆಗೆದುಕೊಂಡ ಯಶ್, ಇದೀಗ ತಮ್ಮ ಮುಂಬರುವ ಚಿತ್ರದ ಕೆಲಸಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಈ ಮಧ್ಯೆ 'ಯಶ್​ 19' ಎಂಬ ತಾತ್ಕಲಿಕ ಟೈಟಲ್ ಮುಖೇನ ಕರೆಯಲಾಗುತ್ತಿರುವ ಚಿತ್ರದ ಕುರಿತಂತೆ ನಟ ಹೊಸ ಅಪ್ಡೇಟ್​ ಕೊಡಲು ಸಜ್ಜಾಗಿದ್ದು, ಇದೇ ಡಿಸೆಂಬರ್ 08 ರಂದು ಶೀರ್ಷಿಕೆ ಅನಾವರಣಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಯಶ್​ ಅವರ ಮುಂದಿನ ಪ್ರಾಜೆಕ್ಟ್​ ಯಾವುದು ಎಂದು ತಿಳಿಯಲು ಕಾತರದಿಂದ ಕಾಯುತ್ತಿರುವ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳು, ಡಿ. 08, ಬೆಳಗ್ಗೆ 9:55ಕ್ಕೆ ಅಧಿಕೃತ ಪೋಸ್ಟರ್​ ಮೂಲಕ ತಿಳಿಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net