ಸಿಲಿಕಾನ್​​ಸಿಟಿ ಮೊದಲ ಸಿಗ್ನಲ್ ಹರಿಕಾರ, ನಿವೃತ್ತ ಪೊಲೀಸ್​ ಮಹಾನಿರ್ದೇಶಕ ​ಬಿ.ಎನ್.ಗರುಡಾಚಾರ್ ನಿಧನ | Passes Away

dk - 2025-03-28T112547.870
Published on

ಬೆಂಗಳೂರು: ನಿವೃತ್ತ ಪೊಲೀಸ್​ ಮಹಾನಿರ್ದೇಶಕ( DG & IGP) ​ಬಿ.ಎನ್.ಗರುಡಾಚಾರ್(96) ಮಾ.28ರಂದು(ಶುಕ್ರವಾರ) ಬೆಳಂಬೆಳಗ್ಗೆ ಸುಮಾರು 3 ಗಂಟೆಗೆ ನಿಧನರಾಗಿದ್ದಾರೆ.(Passes Away)

ವಯೋಸಹಜತೆಯಿಂದ ಅಸುನಿಗಿದ್ದು, ಕೊನೆಯ ಗೌರವವನ್ನು ಅವರ ನಿವಾಸ ಸಂಖ್ಯೆ 25, ಕೃಷ್ಣ ರಸ್ತೆ, ಬಸವನಗುಡಿ ಅಂಚೆ ಕಚೇರಿ ಬೆಂಗಳೂರು ಹಿಂಭಾಗದಲ್ಲಿ ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇನ್ನು ಅಂತ್ಯಕ್ರಿಯೆಯು ನಾಳೆ (ಮಾ.29) ಸಂಜೆ 4 ಗಂಟೆಗೆ ನಗರದ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಪ್ರದೀಪ್, ಪಿಎ ರಿಂದ ಶಾಸಕ ಉದಯ್ ಗರುಡಾಚಾರ್ ಅವರ 8971225440 ಸಂಖ್ಯೆಗೆ ಸಂಪರ್ಕಿಸಬಹುದು.

ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್, ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ ಬಳಿ)ನಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net